ಲಖನೌ ಮೂಲದ ಯುವಕನನ್ನು ಹನಿಟ್ರ್ಯಾಪ್ ಮಾಡಿ 30 ಲಕ್ಷ ಸುಲಿಗೆ ಮಾಡುತ್ತಿದ್ದ ಮಹಿಳೆಯನ್ನು ಉತ್ತರ ಪ್ರದೇಶದ ಬಾಂದಾ ಎಂಬಲ್ಲಿ ಬಂಧಿಸಲಾಗಿದೆ. ಈ ಮಹಿಳೆಯ ಹೆಸರು ಜಾಹೀಲಾ ಬೇಗಂ. ಈಕೆ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾಳೆ. ಜಾಹೀಲಾ ಒಬ್ಬ ವ್ಯಕ್ತಿಯನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ದು ಇದೇ ಮೊದಲೇನಲ್ಲ. ಈ ವರ್ಷದ ಮೇ ತಿಂಗಳ ಆರಂಭದಲ್ಲಿ ಈಕೆ ಒಬ್ಬ ವ್ಯಾಪಾರಿಯನ್ನೂ ಖೆಡ್ಡಾ ತೋಡಿದ್ದಳು.
ಮಾಧ್ಯಮ ವರದಿಗಳ ಪ್ರಕಾರ, ಜಾಹೀಲಾ ಬೇಗಂ ಉದ್ಯಮಿ ಶೈಲೇಶ್ ಜಾಡಿಯಾ ಎಂಬ ವ್ಯಕ್ತಿಯನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ದೈ ಹಿ ಕ ಸಂ ಬಂ ಧ ವನ್ನು ಬೆಳೆಸಿದ್ದಳು. ಅಷ್ಟೇ ಅಲ್ಲದೆ ಅದರ ವಿಡಿಯೋ ಕೂಡ ಮಾಡಿದ್ದಳು. ಇದಾದ ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಬ್ಲಾಕ್ ಮೇಲ್ ಮಾಡುವ ಮೂಲಕ ಉದ್ಯಮಿಯಿಂದ ಸುಮಾರು 50 ಲಕ್ಷ ರೂ. ವಸೂಲಿ ಮಾಡಿದ್ದಳು. ಅಷ್ಟಕ್ಕೂ ತೃಪ್ತಳಾಗದೆ ಈಕೆ ಮತ್ತೆ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಳು. ಪದೇ ಪದೇ ಬಂದ ಬೆದರಿಕೆಗಳಿಂದ ಬೇಸತ್ತು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಜಾಹಿಲಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆದರೆ ಜೈಲಿನಿಂದ ಹೊರಬಂದ ನಂತರ ಮತ್ತೆ ಇದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಳೆ.
ಜೈಲಿನಿಂದ ಹೊರಬಂದ ನಂತರ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯಳಾದಳು. ಈ ವೇಳೆ ಲಕ್ನೋ ನಿವಾಸಿ ಇರ್ಸಾದ್ ಶಹಾದ್ ಖಾನ್ ಎಂಬಾತನನ್ನು ಬಲೆಗೆ ಬೀಳಿಸಿದ್ದಾನೆ. ಇರ್ಸಾದ್ ಶಹಾದ್ ಖಾನ್ ನೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದಳು. ಇದಾದ ನಂತರ ಇಬ್ಬರೂ ಪರಸ್ಪರ ಹತ್ತಿರವಾದರು. ನಂತರ, ಮಹಿಳೆ ಶಹಾದ್‌ನೊಂದಿಗೆ ಈ ಹಿಂದೆ ಬೇರೆ ಗಂಡಸರೊಂದಿಗೆ ಮಾಡಿದ್ದ ಕೆಲಸವನ್ನೇ ಮಾಡಿದ್ದಳು ದೈ ಹಿ ಕ ಸಂಬಂಧ ಬೆಳೆಸಿ ವಿಡಿಯೋ ಮಾಡಿದ್ದಾಳೆ. ನಂತರ ಖಾನ್‌ಗೂ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದಳು. ಆತನಿಂದ ಸುಮಾರು 30 ಲಕ್ಷ ರೂ. ವಸೂಲಿ ಮಾಡಿದ್ದಾಳೆ. ಕೆಲವು ವರದಿಗಳಲ್ಲಿ ಈ ಮೊತ್ತ 40 ಲಕ್ಷ ಎಂದು ನಮೂದಿಸಲಾಗಿದೆ. ಮಹಿಳೆಯ ಬ್ಲ್ಯಾಕ್‌ಮೇಲಿಂಗ್‌ನಿಂದ ಬೇಸತ್ತ ಯುವಕ ಲಕ್ನೋದಲ್ಲಿ ಪ್ರಕರಣ ದಾಖಲಿಸಿದ್ದಾನೆ. ಕೆಲವು ಮಾಧ್ಯಮಗಳಲ್ಲಿ ಬಂಧಿತ ಮಹಿಳೆಯ ಹೆಸರನ್ನು ರಾಹಿಲಾ ಬೇಗಂ ಎಂದು ಉಲ್ಲೇಖಿಸಲಾಗಿದೆ.
ಈ ಮಹಿಳೆ ತನ್ನ ಪ್ರೀತಿಯ ಬಲೆಯಲ್ಲಿ ಬುಲಿಯನ್ ವ್ಯಾಪಾರಿಯನ್ನು ಸಿಲುಕಿಸಿ ಸಾಕಷ್ಟು ಹಣವನ್ನು ಸುಲಿಗೆ ಮಾಡಿದ್ದಾಳೆ. ಇದರಿಂದ ಆತ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಈಕೆಯನ್ನ ಜೈಲಿಗೂ ಕಳುಹಿಸಲಾಗಿತ್ತು. ಇದೀಗ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿದ್ದು, ಫೇಸ್ ಬುಕ್ ಮೂಲಕ ಯುವಕನ ಜತೆ ಸಂಪರ್ಕ ಹೊಂದಿದ್ದಳು.
ಸಂಪರ್ಕದ ನಂತರ, ಇಬ್ಬರೂ ತುಂಬಾ ಹತ್ತಿರವಾದರು. ನಂತರ ಯುವಕನಿಗೆ ಯುವತಿಯ ವಿವಾಹವಾಗಿರುವುದು ಗೊತ್ತಾಯಿತು. ಮಹಿಳೆಯು ಯುವಕನ ಆಕ್ಷೇಪಾರ್ಹ ಚಿತ್ರಗಳು ಮತ್ತು ಫೋಟೋಗಳನ್ನು ಹೊಂದಿದ್ದು, ಈ ಕಾರಣದಿಂದಾಗಿ ಆಕೆಯ ಖಾತೆಗೆ 30 ರಿಂದ 40 ಲಕ್ಷ ರೂಪಾಯಿಗಳನ್ನು ಜಮಾ ಮಾಡಲಾಗಿದೆ, ಅದರ ಪುರಾವೆಗಳು ಸಹ ಸಿಕ್ಕಿವೆ. ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಬಾಂದಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ನಿವಾಸ್ ಮಿಶ್ರಾ ಹೇಳಿದ್ದಾರೆ. ಈ ವೇಳೆ ಆರೋಪಿ ಮಹಿಳೆ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅಭಿನಂದನ್ ತಿಳಿಸಿದ್ದಾರೆ.