ಪಡುಬಿದ್ರಿ: ಪಡುಬಿದ್ರಿ ಪಾದೆಬೆಟ್ಟುವಿನ ರೈಲ್ವೆ ಬ್ರಿಡ್ಜ್ ಬಳಿಯ ರೈಲ್ವೆ ಹಳಿಯಲ್ಲಿ ಯುವಕನ ಶವವೊಂದು ಶುಕ್ರವಾರ ರಾತ್ರಿ ಪತ್ತೆಯಾಗಿದೆ.
ಪಕ್ಕದ ಕಲೋನಿಯ ನಿವಾಸಿ ಸುರೇಶ್ (33) ಮೃತ ಪಟ್ಟ ಯುವಕ. ಇದು ಆಕಸ್ಮಿಕವೊ ಆತ್ಮಹತ್ಯೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯ ಬೇಕಾಗಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.