ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತವರು ಜಿಲ್ಲೆಯಲ್ಲಿ, ರಾಜಕೀಯ ಪ್ರತಿಷ್ಠೆಗಾಗಿ ಕೈ ನಾಯಕನೊಬ್ಬ ಹುಟ್ಟು ಹಬ್ಬ ಆಚರಿಸಿಕೊಂಡಿರೋದು ಮಾತ್ರ ನಂಗನಾಚ್ ಡ್ಯಾನ್ಸ್ ಮೂಲಕವಾಗಿದೆ. ಈಗ ವೀಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕನ ಇಂತಹ ಬರ್ತಡೇ ಪಾರ್ಟಿ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ರಾಮನಗರ ನಗರಸಭೆಯ 19ನೇ ವಾರ್ಡ್ ನ ಸದಸ್ಯ ದೌಲತ್ ಷರೀಫ್ ಎಂಬುವರೇ ಹೀಗೆ ತಮ್ಮ ಬರ್ತಡೇ ಪಾರ್ಟಿಯನ್ನು ಯುವತಿಯ ಅರೆಬೆತ್ತಲೆ ಕುಣಿತದೊಂದಿಗೆ ನಂಗನಾಚ್ ಮೂಲಕ ಆಚರಿಸಿಕೊಂಡಿರುವವರು ಆಗಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ನಗರದ ಯಾರಬ್ ನಗರದಲ್ಲಿನ ಕಲ್ಯಾಣ ಮಂಟಪದಲ್ಲಿ ತಮ್ಮ ಕಾರ್ಯಕರ್ತರು, ಬೆಂಬಲಿಗರೊಂದಿಗೆ ನಗರ ಸಭೆಯ ಕಾಂಗ್ರೆಸ್ ಸದಸ್ಯ ದೌಲತ್ ಷರೀಫ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಹುಟ್ಟು ಹಬ್ಬಕ್ಕೆ ಅರೆಬರೆ ಯುವತಿಯ ನೃತ್ಯವನ್ನು ಆಯೋಜಿಸಲಾಗಿತ್ತು ಎನ್ನಲಾಗಿದೆ. ಅರೆನಗ್ನವಾಗಿ ಯುವತಿಯರು ಕುಣಿಯುತ್ತಾ ನಂಗನಾಚ್ ನೃತ್ಯ ಮಾಡುತ್ತಿದ್ದರೇ, ದೌಲತ್ ಬೆಂಬಲಿಗರು ಹುಚ್ಚೆದ್ದು ಕುಣಿದು, ದುಡ್ಡಿನ ಸುರಿಮಳೆಯನ್ನೇ ಮಾಡಿದ್ದಾರೆ ಎನ್ನಲಾಗಿದೆ.