May 29, 2025 12:51:06 AM
WhatsApp Image 2023-08-26 at 11.23.49 AM

ಮಂಗಳೂರು: ಪರಿಚಿತ ವ್ಯಕ್ತಿ ಹಾಗೂ ಆತನ ಕುಟುಂಬವನ್ನು ಕಿಡ್ನ್ಯಾಪ್ ಮಾಡಿ ಪಿಸ್ತೂಲ್ ತೋರಿಸಿ ಸುಲಿಗೆಗೈದ ಮೌಲ್ಯಯುತ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೇ 12ರಂದು ನಗರದ ಅತ್ತಾವರ ಸ್ಟರಕ್ ರಸ್ತೆಯಲ್ಲಿರುವ ಮ್ಯಾಕ್ ಅಪಾರ್ಟ್ ಮೆಂಟ್ ನಲ್ಲಿ ನಿವಾಸಿ ಮಜೀಬ್ ಸೈಯದ್ ರನ್ನು ಪರಿಚಿತರಾದ ನೌಪಾಲ್ ಮತ್ತು ಪುಚ್ಚ ಎಂಬವರು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಅವರಿಗೆ ಪಿಸ್ತೂಲ್ ತೋರಿಸಿ 5 ಲಕ್ಷ ರೂ ಹಣ ಹಾಗೂ ಕಾರು ನೀಡುವಂತ ಒತ್ತಡವೇರಿದ್ದಾರೆ. ಕೊಡಲು ನಿರಾಕರಿಸಿದಾಗ ಅವರು ಉಪಯೋಗಿಸುತ್ತಿದ್ದ ಕಾರು, ಮೊಬೈಲ್ ಮತ್ತು 18000 ರೂ.‌ ಹಾಗೂ ಮುಜೀಬ್ ಸೈಯದ್ ಪುತ್ರಿಯ ಮೊಬೈಲ್ ಅನ್ನು ಸುಲಿಗೆ ಮಾಡಿದ್ದಾರೆ. ಬಳಿಕ ಅವರನ್ನು ವಿವಿಧೆಡೆ ಸುತ್ತಾಡಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪಿಸ್ತೂಲ್ ತೋರಿಸಿ ವಾಪಾಸ್ 5 ಲಕ್ಷ ಮತ್ತು ಕಾರು ನೀಡುವಂತೆ ಒತ್ತಡವೇರಿದ್ದಾರೆ. ಬಳಿಕ ಮುಜೀಬ್ ಸೈಯದ್ ರವರ ಮನೆಯತ್ತ ಹೋಗಿ ಅವರ ಪತ್ನಿ – ಮಕ್ಕಳನ್ನು ಕಾರಿನ ಹತ್ತಿರಕ್ಕೆ ಬರಮಾಡಿಸಿ ಅವರನ್ನು ಕೂಡ ಕಾರಿನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಮುಜಿಬ್ ಸೈಯದ್ ಪತ್ನಿ – ಮಕ್ಕಳನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ನಟನೆ ಮಾಡಿ ಕಾರಿನ ಹಿಂದಿನ ಸೀಟ್ ನಲ್ಲಿದ್ದ ತನ್ನ ಪುತ್ರಿಯನ್ನು ಕಾರಿನಿಂದ ಏಕಾಏಕಿ ಕೆಳಗಿಳಿಸಿದ್ದಾರೆ. ವಾಪಾಸ್ ಆರೋಪಿ ನೌಫಾಲ್, ಮುಜೀಬ್‌ ಸೈಯದ್‌ ಮತ್ತು ಮನೆಯವರನ್ನು ಕಾರಿನಲ್ಲಿ ಕುಳ್ಳಿತುಕೊಳ್ಳಲು ಒತ್ತಾಯಿಸಿದ್ದಾನೆ. ಆದರೆ ಅವರಾರು ಕುಳಿತುಕೊಳ್ಳದಿದ್ದಾಗ ಇಬ್ಬರೂ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಕಾರನ್ನು ಮಂಗಳೂರು ನಗರದ ನ್ಯೂಚಿತ್ರಾ ಜಂಕ್ತನ್ ಬಳಿಯಿಂದ ಅದೇ ದಿನ ರಾತ್ರಿ 8:30ಗೆ ವಶಪಡಿಸಿದ್ದಾರೆ. ಪ್ರಕರಣವೊಂದರಲ್ಲಿ ಮಂಗಳೂರು ನಗರದ ಗ್ರಾಮಾಂತರ ಪೊಲೀಸ್‌ ಠಾಣಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನೌಫಾಲ್(31) ಮಂಗಳೂರು ದಕ್ಷಿಣ ಠಾಣಾ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ. ಆತನನ್ನು ಕೂಲಂಕುಷವಾಗಿ ತನಿಖೆ ನಡೆಸಿ ಸುಲಿಗೆಗೈದ ಎರಡು ಮೊಬೈಲ್ ಸೆಟ್, ಕಾರಿನ ಕೀ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಟಿಕೆ ಪಿಸ್ತೂಲ್ ಅನ್ನು ತನ್ನ ಮನೆಯಲ್ಲಿ ಇಟ್ಟಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅವುಗಳನ್ನು ಆಗಸ್ಟ್ 25ರಂದು ಸ್ವಾಧೀನಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟು ಮಂಗಳೂರು ನಗರದ ಪಡೀಲ್ ನಾಗುರಿ ಕಡಯ ಮೊಹಮ್ಮದ್ ನಿಶಾಕ್ ಪುಚ್ಚ ಎಂಬಾತ ತಲೆಮರೆಸಿಕೊಂಡಿದ್ದಾನೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>