June 13, 2025
111

ಗ್ವಾಲಿಯರ್‌: ಪಾಕಿಸ್ತಾನದ ಖೈಬರ್‌ ಪಖ್ತುನ್‌ಖ್ವಾ ಪ್ರಾಂತ್ಯಕ್ಕೆ ತೆರಳಿ ಮಂಗಳವಾರ ಅಲ್ಲಿ ತನ್ನ ಫೇಸ್‌ಬುಕ್‌ ಸ್ನೇಹಿತನನ್ನು ಎರಡು ಮಕ್ಕಳ ತಾಯಿ, ಭಾರತೀಯ ಮಹಿಳೆ ಅಂಜು ವಿವಾಹವಾಗಿದ್ದಾಳೆ. ಈಗ ʻಅಂಜು ನಮ್ಮ ಪಾಲಿಗೆ ಸತ್ತಂತೆʼ ಎಂದು ಆಕೆಯ ತಂದೆ ಅಳಲು ತೋಡಿಕೊಂಡಿದ್ದಾರೆ.

ಭಾರತದ ನಿವಾಸಿ ಅಂಜು ವಾಘಾ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದರು. ಅಂಜು ನೆರೆಯ ದೇಶದ ಖೈಬರ್ ಪಖ್ತುಂಖ್ವಾದಲ್ಲಿ ನೆಲೆಸಿರುವ ತನ್ನ ಪ್ರಿಯಕರ ನಸ್ರುಲ್ಲಾನನ್ನು ಮದುವೆಯಾಗಿದ್ದಾಳೆ ಎಂಬ ಸುದ್ದಿ ಬಂದಿತ್ತು. ಇಷ್ಟು ಮಾತ್ರವಲ್ಲದೆ ಧರ್ಮವನ್ನು ಬದಲಿಸಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಅಂಜು ತನ್ನ ಹೆಸರನ್ನು ಧರ್ಮದ ಜೊತೆಗೆ ಬದಲಾಯಿಸಿಕೊಂಡಿದ್ದಾಳೆ. ಈಗ ಅವಳ ಹೊಸ ಹೆಸರು ಫಾತಿಮಾ. ಇತ್ತ ಮಗಳು ಮಾಡಿದ ಕೆಲಸಕ್ಕೆ ಕುಟುಂಬ ತಲೆತಗ್ಗಿಸುವಂತಾಗಿದೆ. ಮನೆಯಿಂದ ಹೊರಗೆ ಹೋದವಳು ನಮ್ಮ ಪಾಲಿಗೆ ಸತ್ತಂತೆ ಎಂದಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಗೆಳೆಯನನ್ನು ಭೇಟಿ ಮಾಡುವ ಸಲುವಾಗಿ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಇಬ್ಬರು ಮಕ್ಕಳ ತಾಯಿ ಅಂಜು(34 ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ತನ್ನ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ (29)ನನ್ನು ಮಂಗಳವಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸ್ಥಳೀಯ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>