ಬಾಲಸೋರ್ (ಒಡಿಶಾ) : ಪಾಕಿಸ್ತಾನದ ಮಹಿಳಾ ಗೂಢಚಾರರೊಂದಿಗೆ ದೇಶದ ರಹಸ್ಯ ರಕ್ಷಣಾ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಡಿಆರ್‌ಡಿಒ ಅಧಿಕಾರಿಯನ್ನು ಅರೆಸ್ಟ್ ಮಾಡಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಬಂಧಿತ ಅಧಿಕಾರಿ DRDO ಬಲರಾಮ್ ಡೇ ಎಂದು ಗುರುತಿಸಲಾಗಿದೆ. ಘಟನೆಯ ಹೆಚ್ಚಿನ ತನಿಖೆಗಾಗಿ ಬಾಲಸೋರ್ ಪೊಲೀಸರು ಐದು ದಿನಗಳ ಬಂಧನಕ್ಕಾಗಿ ಬಾಲಸೋರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ನಾಲ್ಕು ದಿನಗಳ ಕಾಲ ಆತನನ್ನು ವಶಕ್ಕೆ ಪಡೆಯಲು ಕೋರ್ಟ್ ಅನುಮತಿ ನೀಡಿದೆ.
ಶುಕ್ರವಾರ ಡಿಆರ್‌ಡಿಒ ಅಧಿಕಾರಿಯನ್ನು ಒಡಿಶಾ ಪೊಲೀಸರು ಪಾಕಿಸ್ತಾನಿ ಮಹಿಳಾ ಗೂಢಚಾರಿಕೆಯೊಂದಿಗೆ ಸುಮಾರು ಒಂದು ವರ್ಷದಿಂದ ರಹಸ್ಯ ರಕ್ಷಣಾ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಬಂಧಿಸಿದ್ದರು.
ಕಳೆದ ಒಂದು ತಿಂಗಳಿನಿಂದ ಪೊಲೀಸರು ಅಧಿಕಾರಿಯ ಚಟುವಟಿಕೆಗಳನ್ನು ಪತ್ತೆಹಚ್ಚುತ್ತಿದ್ದರು ಮತ್ತು ಅವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ, ಹೆಚ್ಚಿನ ತನಿಖೆ ನಡೆಯುತ್ತಿದೆ.