ಉಡುಪಿ: ಉಡುಪಿ ಸಮೀಪದ ಹಿರಿಯಡ್ಕದ ಸೆಕೆಂಡ್ ಹ್ಯಾಂಡ್ ಬೈಕ್ ಅಂಗಡಿಯಲ್ಲಿ ಕಳ್ಳನೊಬ್ಬ ಕೈಚಳಕ ತೋರಿದ್ದು ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಮಾರಾಟ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳ ಗಲ್ಲಾಪೆಟ್ಟಿಗೆಯಲ್ಲಿದ್ದ 30 ಸಾವಿರ ರೂಪಾಯಿ ಎಗರಿಸಿದ್ದಾನೆ. ಬಳಿಕ ಅಂಗಡಿಯವರು ಹಣ ಕಳವು ಆಗಿರುವ ಬಗ್ಗೆ ತಲೆಕೆಡಿಸಿಕೊಂಡು ಸಿಸಿ ಕ್ಯಾಮೆರಾ ಫೂಟೇಜ್ ಪರಿಶೀಲಿಸಿದಾಗ ಕಳ್ಳನ ಕೈಚಳಕ ಬಯಲಾಗಿದೆ. ಕಳ್ಳ ಹಣ ಕದ್ದು ಬಸ್ಸಿನಲ್ಲಿ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ,ಈ ಫೂಟೇಜ್ ಸಮೇತ ಅಂಗಡಿಯವರು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.