ಉಡುಪಿ: ವಿದ್ಯಾರ್ಥಿನಿ ನಿಖಿತಾ ಕುಲಾಲ್ ಸಾವು ಪ್ರಕರಣ ಉನ್ನತ ಮಟ್ಟದ ತನಿಖೆಗೆ ಎಬಿವಿಪಿ ಆಗ್ರಹ, ಪರಿಹಾರ ಘೋಷಿಸಲು ಮನವಿ

ಉಡುಪಿ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ತೆರಳಿದ ವಿದ್ಯಾರ್ಥಿನಿ ಮರಳಿ ಮನೆಗೆ ಶವವಾಗಿ ಹಿಂದುರುಗಿದ ಹೃದಯ ವಿದ್ರಾವಕ ಘಟನೆ ಉಡುಪಿಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ ನಿಕಿತಾ ಮೃತಪಟ್ಟಿದ್ದಾಳೆಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು, ಸರ್ವಕಾಲೇಜು ವಿದ್ಯಾರ್ಥಿ ಶಕ್ತಿ ಸಂಘಟನೆ ಸೇರಿದಂತೆ ಸಮುದಾಯದ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ ಸಮೀಪದ ಕೆಮ್ಮುಂಡೇಲಿನ ನಿಕಿತಾ ಕುಲಾಲ್ ಜೂನ್ ೧೪ರ ಬುಧವಾರ ಉಡುಪಿಯ ಸಿಟಿ ಆಸ್ಪತ್ರೆಗೆ ಹೊಟ್ಟೆ ನೋವೆಂದು ಭೇಟಿ ನೀಡಿದ್ದರು. ಆದರೆ ಭಾನುವಾರ ವೇಳೆಗೆ ನಿಕಿತಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಿಟಿ ಆಸ್ಪತ್ರೆಯ ಸರ್ಜನ್ ಡಾ. ರಾಮಚಂದ್ರ ರಾವ್ ಸ್ಪಷ್ಟನೆ ನಿಖಿತಾ ಸಾವಿನ ಬಗ್ಗೆ ಸರ್ಜನ್ ಡಾ. ರಾಮಚಂದ್ರ ರಾವ್ ಸ್ಪಷ್ಟನೆ ನೀಡಿದ್ದು, ಚಿಕಿತ್ಸೆಗಾಗಿ ನಮ್ಮ ಬಳಿಗೆ ಬಂದ ನಿಖಿತಾ ಅವರ ನಿಧನಕ್ಕೆ ನಾವು ವಿಷಾದಿಸುತ್ತೇವೆ. ನಾವು ಅತ್ಯುತ್ತಮ ಚಿಕಿತ್ಸೆಯನ್ನು ನೀಡಿದ್ದೇವೆ. ದುರದೃಷ್ಟವಶಾತ್ ನಾವು ಅವಳನ್ನು ಕಳೆದುಕೊಂಡಿದ್ದೇವೆ. ಇಲ್ಲಿ ನಿರ್ಲಕ್ಷ್ಯ ಇಲ್ಲ. ನಿಕಿತಾ ಜೂನ್ ೧೪ರ ಬುಧವಾರ ಸಿಟಿ ಆಸ್ಪತ್ರೆಗೆ ವಾಂತಿ, ಹೊಟ್ಟೆ ನೋವು ಕಾರಣ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದಾಗ ಕರುಳಿನಲ್ಲಿ ಸಮಸ್ಯೆಗಳು ಕಂಡು ಬಂದವು. ನಿಕಿತಾ ಅವರ ತಾಯಿಗೆ ವಿವರಿಸಿ ಅವರ ಒಪ್ಪಿಗೆ ಪಡೆದು ಲ್ಯಾಪ್ರೋಸ್ಕೋಪಿಕ್ ಸರ್ಜರಿ ಮಾಡಲಾಗಿದೆ. ಎಲ್ಲಾ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಾವು ಅನುಸರಿಸುವ ದಿನನಿತ್ಯದ ಕಾರ್ಯವಿಧಾನವಾಗಿ ಎಲ್ಲಾ ಪ್ರಕ್ರಿಯೆಗಳನ್ನು ವೀಡಿಯೋ ರೆಕಾರ್ಡ್ ಮಾಡಲಾಗಿದೆ. ಶಸ್ತ್ರಚಿಕಿತ್ಸಾ ಕಾರ್ಯವಿಧಾನವನ್ನು ಪೂರ್ಣಗೊಳಿಸಿದ ನಂತರ, ರೋಗಿಯು ಅರಿವಳಿಕೆಯಿಂದ ಹೊರಬಂದಿಲ್ಲ. ಮತ್ತು ಉಸಿರಾಟವೂ ನಿಧಾನಗತಿಯಲ್ಲಿ ಆಗಿದೆ. ನಾವು ಎಷ್ಟೇ ಪ್ರಯತ್ನ ಪಟ್ಟರೂ ನಿಕಿತಾರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಮೃತಪಟ್ಟ ಬಳಿಕ ಪೋಸ್ಟ್ ಮಾರ್ಟಂ ಮಾಡಲು ಅನುಮತಿ ಕೊಡುವಂತೆ ನಿಕಿತಾ ಸಂಬಂಧಿಕರನ್ನು ಒತ್ತಾಯಿಸಿದ್ದೇವೆ. ಆದರೆ ಮರಣೋತ್ತರ ಪರೀಕ್ಷೆ ನಡೆಸಲು ರೋಗಿಯ ಸಂಬಂಧಿಕರು ನಿರಾಕರಿಸಿದ್ದಾರೆ ಎಂದರು. ವೈದ್ಯರ ಸ್ಪಷ್ಠಿಕರಣದ ನಂತರವೂ ಪ್ರತಿಭಟನೆ ತೀವ್ರವಾದ ಹಿನ್ನಲೆಯಲ್ಲಿ ಆಸ್ಪತ್ರೆಯ ಕೊಠಡಿಯಲ್ಲಿ ಪೋಷಕರು, ಸಂಬಂಧಿಕರೊಂದಿಗೆ ವೈದ್ಯರು ಮಾತುಕತೆ ನಡೆಸಿದ್ದಾರೆ. ಆದರೆ ವೈದ್ಯರ ಮನವೊಲಿಕೆ ನಿಕಿತಾ ಪೋಷಕರು ಒಪ್ಪದೇ ಆಸ್ಪತ್ರೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳಕ್ಕಾಗಮಿಸಿ ನಿಕಿತಾಳಿಗೆ ಚಿಕಿತ್ಸೆ ಕೊಟ್ಟ ವೈದ್ಯೆ ರಜನಿಪ್ರಭಾ ಹೇಳಿಕೆ ನೀಡಿ ಸಂಬಂಧಿಕರ ಒತ್ತಾಯದಿಂದ ಟ್ಯೂಬ್ ತೆಗೆದಿದ್ದೇವೆ ಎಂದು ಎಂದಿದ್ದು, ವೈದ್ಯೆಯ ಸ್ಪಷ್ಟೀಕರಣಕ್ಕೆ ಪೋಷಕರು ಅಸಮಾಧಾನ ಹೊರಹಾಕಿದ್ದರು. ಪ್ರತಿಭಟನೆಯಲ್ಲಿ ಎಬಿವಿಪಿ ಆಸ್ಪತ್ರೆಗೆ ಒಂದು ವಾರ ಗಡುವು ನೀಡಿದೆ. ಆಸ್ಪತ್ರೆಯ ವಿರುದ್ಧ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಎಎಸ್ಪಿ ಸಿದ್ದಲಿಂಗಪ್ಪ ಮೂಲಕ ಉಡುಪಿ ಡಿಸಿ, ಡಿಎಚ್‌ಒಗೆ ಎಬಿವಿಪಿ ಒತ್ತಾಯಿಸಿದೆ. ನಿಖಿತಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಒಂದು ವಾರದ ಒಳಗೆ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ನಿಕಿತಾ ಸಾವಿನ ನ್ಯಾಯಕ್ಕಾಗಿ ಪಟ್ಟು ಬಿಡದ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಗಳು ಅಜ್ಜರಕಾಡು ಸೈನಿಕ ಸ್ಮಾರಕದಿಂದ ಮೆರವಣಿಗೆ ಮೂಲಕ ಹೊರಟು, ಮೃತ ನಿಕಿತಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಿದ್ದಾರೆ. ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಗ್ರಹ ಹದಿಹರೆಯದ ಪ್ರತಿಭಾನ್ವಿತ ವಿದ್ಯಾರ್ಥಿಯಾದ ನಿಖಿತಾ ಅನಾರೋಗ್ಯಕ್ಕೆ ಸಂಬಂಧಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯಕೀಯ ಲೋಪದಿಂದ ಆಕೆ ಮೃತಪಟ್ಟಿರುವುದಾಗಿ ಮಯವರು ತಿಳಿಸಿದ್ದಾರೆ. ಇದೊಂದು ಆಘಾತಕಾರಿ ಸಂಗತಿಯಾಗಿದ್ದು, ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು ಎಂಬುದು ನಮ್ಮ ಕಳಕಳಿ. ಸಹೋದರಿ ನಿಖಿತಾ ಆತ್ಮಕ್ಕೆ ಶ್ರದ್ಧಾಂಜಲಿ ಪ್ರಾರ್ಥಿಸುತ್ತಾ, ಈ ಕುರಿತು ಸಂತಾಪ ಸೂಚಿಸುತ್ತೇವೆ. ಒಬ್ಬಳೆ ಮಗಳನ್ನು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಕಳೆದುಕೊಂಡು ದುಃಖದಲ್ಲಿರುವ ಮನೆಯವರಿಗೆ ಪರಿಹಾರ ಮತ್ತು ನ್ಯಾಯದ ಕುರಿತಾದ ಎಲ್ಲಾ ಪ್ರಯತ್ನಗಳಿಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯು ಸಹಕಾರ ಮತ್ತು ಬೆಂಬಲವನ್ನು ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ. ಉಡುಪಿ ಜಿಲ್ಲಾ ಕುಲಾಲ ಕುಂಬಾರ ಯುವ ವೇದಿಕೆ ಆಗ್ರಹ ವಿದ್ಯಾರ್ಥಿನಿ ನಿಖಿತಾ ಸಾವು ಆಘಾತಕಾರಿ ಸಂಗತಿಯಾಗಿದು ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು ಎಂಬುದು ನಮ್ಮ ಕಳಕಳಿ. ಸಹೋದರಿ ನಿಖಿತಾ ಆತ್ಮಕ್ಕೆ ಶ್ರದ್ಧಾಂಜಲಿ ಪ್ರಾರ್ಥಿಸುತ್ತಾ, ಈ ಕುರಿತು ಸಂತಾಪ ಸೂಚಿಸುತ್ತೇವೆ. ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆಯನ್ನು ನಡೆಸಿ ಸೂಕ್ತ ನ್ಯಾಯವನ್ನು ಒದಗಿಸಿಕೊಟ್ಟು ಮತ್ತು ಅವರ ಕುಟುಂಬಕ್ಕೆ ಪರಿಹಾರ ಧನವನ್ನು ನೀಡಬೇಕೆಂಬುದನ್ನು ಆಗ್ರಹಿಸಿದೆ. ಈ ಸಂದರ್ಭದಲ್ಲಿ ಕುಲಾಲ ಕುಂಬಾರ ಯುವ ವೇದಿಕೆ ಜಿಲ್ಲಾಧ್ಯಕ್ಷ ದಿವಾಕರ್ ಬಂಗೇರ, ಯುವ ವೇದಿಕೆ ಪ್ರಮುಖರಾದ ಸಂತೋಷ್ ಕುಲಾಲ್ ಪಕ್ಕಾಳು , ಸುರೇಂದ್ರ ಕುಲಾಲ್ , ಬಸವರಾಜ್ ಕುಲಾಲ್ ಉದಯ ಕುಲಾಲ್ ಕಾಪು, ಪೆರಡೂರು ಕುಲಾಲ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಕುಲಾಲ್, ಶಂಕರ್ ಕುಲಾಲ್, ಸುಧಾಕರ್ ಕುಲಾಲ್, ಹರೀಶ್, ಉದಯ್ ಕುಲಾಲ್, ಕಾಪು ಕುಲಾಲ ಸಂಘದ ಅಧ್ಯಕ್ಷರಾದ ಸಂದೀಪ್ ಬಂಗೇರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Check Also

ಜುಲೈ.23ರಂದು 2024-25ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ( Union Budget ) ಜುಲೈ 23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ತಿನ …

Leave a Reply

Your email address will not be published. Required fields are marked *

You cannot copy content of this page.