ನವದೆಹಲಿ : ಭಾರತದ ಚುನಾವಣಾ ಆಯೋಗ (ECI) ಲೋಕಸಭಾ ಚುನಾವಣೆ 2024 ವೇಳಾಪಟ್ಟಿ ಘೋಷಿಸಲು ಸಜ್ಜಾಗುತ್ತಿದೆ. ಚುನಾವಣಾ ಆಯೋಗದ ತಂಡಗಳು ಪ್ರಸ್ತುತ ವಿವಿಧ ರಾಜ್ಯಗಳ ಚುನಾವಣಾ ಸನ್ನದ್ಧತೆಯನ್ನು ಮೌಲ್ಯಮಾಪನ ಮಾಡುತ್ತಿವೆ.
ಚುನಾವಣಾ ಆಯೋಗದ ಮೌಲ್ಯಮಾಪನವು ಮಾರ್ಚ್ 13 ರೊಳಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಏತನ್ಮಧ್ಯೆ, ಚುನಾವಣಾ ದಿನಾಂಕಗಳ ಬಗ್ಗೆ ಮಾಹಿತಿ ನೀಡುವ ನಕಲಿ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ಚಿತ್ರದ ಪ್ರಕಾರ, ಮಾರ್ಚ್ 12 ರಿಂದ ನೀತಿ ಸಂಹಿತೆ ಜಾರಿಗೆ ಬರಲಿದೆ. ಏಪ್ರಿಲ್ 19 ರಂದು ಮತದಾನ ನಡೆಯಲಿದ್ದು, ಮೇ 22 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಬರೆಯಲಾಗಿದೆ.
2024 ರ ಲೋಕಸಭಾ ಚುನಾವಣೆಯ ವೇಳಾಪಟ್ಟಿಯ ಬಗ್ಗೆ ವೈರಲ್ ಆಗುತ್ತಿರುವ ನಕಲಿ ವಾಟ್ಸಾಪ್ ಸಂದೇಶವನ್ನು ಭಾರತದ ಚುನಾವಣಾ ಆಯೋಗ (ಇಸಿಐ) ತಳ್ಳಿಹಾಕಿದೆ. ಯಾವುದೇ ಅಧಿಕೃತ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲ, ಮತ್ತು ಚುನಾವಣಾ ಆಯೋಗವು ಪತ್ರಿಕಾಗೋಷ್ಠಿಯ ಮೂಲಕ ಅದನ್ನು ಪ್ರಕಟಿಸಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚುನಾವಣಾ ಆಯೋಗ, “#LokSabhaElections2024 ವೇಳಾಪಟ್ಟಿಯ ಬಗ್ಗೆ ವಾಟ್ಸಾಪ್ನಲ್ಲಿ ನಕಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ECI ಇದುವರೆಗೆ ಯಾವುದೇ ದಿನಾಂಕಗಳನ್ನು ಘೋಷಿಸಿಲ್ಲ ಎಂದು ಹೇಳಿದೆ.