ಹೈದರಾಬಾದ್: ಇತ್ತೀಚೆಗೆ ಹೃದಯಾಘಾತಗಳು ಮರಣಘಾತಗಳಾಗುತ್ತಿದ್ದು ಯುವಕರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ಯುವ ಪೊಲೀಸ್ ಕಾನ್ಸ್ ಟೇಬಲ್ ಇಹಲೋಕ ತ್ಯಜಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ವಿಶಾಲ್ (24ವರ್ಷ) ಎಂಬ ಬೋವೆನ್ ಪಲ್ಲಿ ನಿವಾಸಿಯಾಗಿದ್ದು, ಆಸೀಫ್ ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಿಶಾಲ್ ಅವರು ಪುಷ್ ಅಪ್ಸ್ ಮಾಡುತ್ತಿರುವುದು ಕಂಡುಬಂದಿದ್ದು, ಬಳಿಕ ವಿಶಾಲ್ ಮತ್ತೊಂದು ವರ್ಕ್ ಔಟ್ ಗೆ ತೆರಳಲು ಹೊರಟಾಗ ವಿಪರೀತ ಕೆಮ್ಮುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ದೇಹದ ಮೇಲಿನ ನಿಯಂತ್ರಣ ತಪ್ಪಿದ್ದರಿಂದ ವಿಶಾಲ್ ಸಮೀಪದಲ್ಲೇ ಇದ್ದ ಜಿಲ್ ಯಂತ್ರವನ್ನು ಆಧಾರವಾಗಿ ಹಿಡಿದುಕೊಂಡಾಗ ಕೆಮ್ಮು ವಿಪರೀತವಾಗಿ ನೆಲದ ಮೇಲೆ ಕುಸಿದು ಬಿದ್ದು ಕೊನೆಯುಸಿರೆಳೆದ ದೃಶ್ಯ ವಿಡಿಯೋದಲ್ಲಿದೆ. ಜಿಮ್ ನೊಳಗೆ ಇದ್ದ ಇತರರು ಕೂಡಲೇ ಜಿಮ್ ತರಬೇತುದಾರರನ್ನು ಕರೆಸಿ, ಉಸಿರಾಟ ಪುನರ್ ಚಾಲನೆಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರೂ ವಿಫಲವಾಗಿ ಕೊನೆಗೆ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಷ್ಟರಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
Watch CCTV Footage 👇
He died at gym due to heart attack. pic.twitter.com/FbA6hghS4E— Arbaaz The Great (@ArbaazTheGreat1) February 23, 2023