March 6, 2026
WhatsApp Image 2023-02-25 at 5.38.34 PM

ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಮೊನ್ನೆಯಷ್ಟೇ ತಮ್ಮ ಮನೆಯ ಬೆಕ್ಕು ಶ್ಯಾಡೋ ಕಾಣಿಯಾಗಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಈ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿದ್ದರು ಇದೀಗ ಬೆಕ್ಕು ಮಂಗಳೂರಿನಲ್ಲಿ ಪತ್ತೆಯಾಗಿದೆ.

ತಮ್ಮ ಪ್ರೀತಿಯ ಬೆಕ್ಕು ಸಿಕ್ಕಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ದೀಪಿಕಾ ದಾಸ್, ಬೆಂಗಳೂರಿನಲ್ಲಿ ಕಳೆದು ಹೋದ ಬೆಕ್ಕು ಮಂಗಳೂರಿನಲ್ಲಿ ಪತ್ತೆಯಾಗಿದೆ ಎಂದಿದ್ದಾರೆ. ಅಲ್ಲದೆ, ತಮ್ಮ ಬೆಕ್ಕು ಅಪಹರಣಕ್ಕೆ ಒಳಗಾಗಿತ್ತೆಂದು ಸಹ ಹೇಳಿದ್ದಾರೆ.

‘ಒಳ್ಳೆಯ ಸುದ್ದಿ, ನಮಗೆ ಶ್ಯಾಡೊ (ಬೆಕ್ಕು) ಸಿಕ್ಕಿತು. ಬೆಕ್ಕನ್ನು ಅಪಹರಣ ಮಾಡಿ ಮಂಗಳೂರಿಗೆ ಕಳಿಸಲಾಗಿತ್ತು. ಕೊನೆಗೂ ನಮ್ಮ ಬೆಕ್ಕು ಸಿಕ್ಕಿತು. ಬೆಕ್ಕನ್ನು ಪತ್ತೆ ಹಚ್ಚುವಲ್ಲಿ ನೆರವಾದ ಎಲ್ಲರಿಗೂ ನನ್ನ ಧನ್ಯವಾದಗಳು. ಬೆಕ್ಕು ನಮ್ಮ ಕೈ ಸೇರಿದ ಬಳಿಕ ಸಂಪೂರ್ಣ ವಿವರವನ್ನು ಹಂಚಿಕೊಳ್ಳುತ್ತೇನೆ’ ಎಂದಿದ್ದಾರೆ ದೀಪಿಕಾ ದಾಸ್.

ದೀಪಿಕಾ ದಾಸ್ ಅವರಿಗೆ ಬೆಕ್ಕು ಮತ್ತು ಶ್ವಾನ ಎಂದರೆ ತುಂಬಾ ಇಷ್ಟ. ಅವರ ಮನೆಯಲ್ಲಿ ಪ್ರಾಣಿಗಳು ಕೂಡ ಕುಟುಂಬದ ಸದಸ್ಯರಾಗಿದ್ದಾರೆ. ಮನೆಯವರಿಗೆ ಕೊಡುವಷ್ಟೇ ಪ್ರೀತಿಯನ್ನು ಬೆಕ್ಕು-ಶ್ವಾನಕ್ಕೆ ಕೊಡುತ್ತಿದ್ದಾರೆ. ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದ ಶ್ಯಾಡೋ ಕಾಣೆಯಾಗಿದ್ದರ ಬಗ್ಗೆ ಅವರು ತುಂಬಾನೇ ನೊಂದುಕೊಂಡಿದ್ದರು.

ದೀಪಿಕಾ ದಾಸ್​ರ ಬೆಕ್ಕು ಏಳು ದಿನಗಳ ಹಿಂದೆ ಬೆಂಗಳೂರಿನ ವಿಶ್ವೇಶ್ವರ ಬಡಾವಣೆಯಿಂದ ನಾಪತ್ತೆಯಾಗಿತ್ತು. ಪರ್ಷಿಯನ್ ಬ್ರೀಡ್​ನ ಕಪ್ಪು ಬಣ್ಣದ ಬೆಕ್ಕನ್ನು ಹುಡುಕಿಕೊಟ್ಟವರಿಗೆ 10 ರಿಂದ 15 ಸಾವಿರ ಬಹುಮಾನ ನೀಡಲಾಗುವುದು ಎಂದು ದೀಪಿಕಾ ದಾಸ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಜಾಹೀರಾತು ನೀಡಿದ್ದರು.

About The Author

Leave a Reply

Your email address will not be published. Required fields are marked *

You cannot copy content of this page.