March 18, 2026
WhatsApp Image 2024-12-24 at 12.10.54 PM

ಭಟ್ಕಳ: ಮುರುಡೇಶ್ವರದ ಕಡಲ ತೀರದಲ್ಲಿ ಅವಘಡ ನಡೆದ ಕಾರಣ ಕಡಲತೀರ ಪ್ರವೇಶ ನಿಷೇಧಿಸಲಾಗಿದ್ದು, ನಿಷೇಧಕ್ಕೆ ಸಡಲಿಕೆ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಅದಕ್ಕಿಂತ ಮುಖ್ಯವಾಗಿ ಕಡಲತೀರದಲ್ಲಿ `ಸಿಮ್ಮಿಂಗ್ ಝೋನ್’ ಎಂದು ಕೆಲ ಪ್ರದೇಶ ಗುರುತಿಸಿ ಅಲ್ಲಿ ಮಾತ್ರ ನೀರಿಗಿಳಿಯಲು ಅವಕಾಶ ಕಲ್ಪಿಸುವ ಬಗ್ಗೆ ನಿರ್ಧರಿಸಲಾಗಿದೆ.

ಈ ಕುರಿತು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದ್ದಾರೆ. ಕಡಲತೀರದ ಉದ್ದಕ್ಕೂ ಭದ್ರತೆ ನೀಡಲು ಸಿಬ್ಬಂದಿ ಕೊರತೆಯಿರುವ ಕಾರಣ ಸೂಚಿಸಿದ ಸ್ಥಳದಲ್ಲಿ ಮಾತ್ರ ಪ್ರವಾಸಿಗರು ನೀರಿಗಿಳಿಯಬೇಕು. ಅಲ್ಲಿ ಭದ್ರತಾ ಸಿಬ್ಬಂದಿ ಇರಲಿದ್ದು, ಪ್ರವಾಸಿಗರ ಸುರಕ್ಷತೆ ಕಾಪಾಡಲಿದ್ದಾರೆ. ಇದರಿಂದ ಸಾವು-ನೋವಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯ ಎಂಬ ಚಿಂತನೆ ಜಿಲ್ಲಾಡಳಿತದ ಮುಂದಿದೆ.

`ಈಜುಲು ತೆರಳುವ ಪ್ರದೇಶಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಇನ್ನಷ್ಟು ಲೈಫ್‌ಗಾರ್ಡ ಒದಗಿಸಲು ಈ ಹಿಂದೆ ಅನುದಾನ ಕೊರತೆಯಿದ್ದು, ಪ್ರವಾಸೋದ್ಯಮ ಚಟುವಟಿಕೆಗಳಿಂದ ಆದಾಯ ಬಂದಿದೆ. ಇದೀಗ ಅದನ್ನು ಬಳಸಿಕೊಂಡು ಸುರಕ್ಷತೆ ಒದಗಿಸಲಾಗುತ್ತದೆ’ ಎಂದು ತಿಳಿಸಿದರು. ಕಡಲತೀರದಲ್ಲಿನ ಪ್ರವಾಸಿಗರ ರಕ್ಷಣೆಗೆ ಲೈಫ್‌ಗಾರ್ಡ ಸಿಬ್ಬಂದಿ, ಪೊಲೀಸರು ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.

About The Author

Leave a Reply

Your email address will not be published. Required fields are marked *

You cannot copy content of this page.