ಡೆತ್ ನೋಟ್ ನಲ್ಲಿ ಹೆಸರಿದ್ದ ಮಾತ್ರಕ್ಕೆ ಆರೋಪಿ ಎಂಬ ತೀರ್ಮಾನ ಸಲ್ಲ: ಹೈಕೋರ್ಟ್ ಮಹತ್ವದ ಆದೇಶ

ಆತ್ಮಹತ್ಯೆ ನೋಟ್ ನಲ್ಲಿ ವ್ಯಕ್ತಿಯ ಹೆಸರಿದ್ದ ಮಾತ್ರಕ್ಕೆ ಆತ ಆರೋಪಿ ಎಂಬ ತೀರ್ಮಾನ ಸರಿಯಲ್ಲ, ನಿಜಕ್ಕೂ ಆತ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಯೇ ಇಲ್ಲವೇ ಎನ್ನುವುದರ ಬಗ್ಗೆ ಸಂಪೂರ್ಣ ತನಿಖೆ ಅತ್ಯಗತ್ಯವಿದೆ ಎಂದು ಹೈಕೋರ್ಟ್ ಕಲಬುರಗಿ ಪೀಠ ಮಹತ್ವದ ತೀರ್ಪು ನೀಡಿದೆ.

ಇತ್ತೀಚೆಗೆ ವಿಜಯಪುರ ಜಿಲ್ಲೆಯ ಪ್ರಕರಣವೊಂದರಲ್ಲಿ ಹೈಕೋರ್ಟ್ ಕಲಬುರಗಿ ಪೀಠ ತೀರ್ಪು ನೀಡಿದೆ. ಶಿಕ್ಷಕ ಬಸವರಾಜ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ ಕಾರಣವೆಂಬ ಆರೋಪ ಎದುರಿಸುತ್ತಿದ್ದಾರೆ. ಹನುಮಂತರಾಯಪ್ಪ ಅವರು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯಕ್ ಅವರಿದ್ದ ಏಕಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.

ಆತ್ಮಹತ್ಯೆ ಪ್ರಕರಣಗಳಲ್ಲಿ ದೊರೆಯುವ ಡೆತ್ ನೋಟ್ ಗಳಲ್ಲಿ ಕೆಲವು ಸಲ ವ್ಯಕ್ತಿ ಹೆಸರು ಉಲ್ಲೇಖವಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಮೊದಲಿಗೆ ತನಿಖೆ ನಡೆಸಿ ನೋಟ್ ನಲ್ಲಿರುವ ಅಂಶಗಳು, ಸತ್ಯಾಸತ್ಯತೆ ಪರಿಶೀಲಿಸುವ ಬದಲು ತಕ್ಷಣಕ್ಕೆ ಐಪಿಸಿ 306ರ ಅಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿ ಅಪರಾಧ ಎಸಗಿದ್ದಾರೆ ಎನ್ನುವಂತೆ ಭಾವಿಸಿ ಅವರನ್ನು ಬಂಧಿಸುವುದು ಸಾಮಾನ್ಯವಾಗಿದೆ. ಡೆತ್ ನೋಟ್ ನಲ್ಲಿರುವ ಅಂಶಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ನಿಜವಾಗಿಯೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆಗ ಸತ್ಯಾಂಶ ಅರಿಯಲು ಪೂರ್ಣ ಪ್ರಮಾಣದ ತನಿಖೆ, ವಿಚಾರಣೆ ನಡೆಯಬೇಕಾಗುತ್ತದೆ ಎಂದು ಹೇಳಿದೆ.

ಒಂದು ವೇಳೆ ಐಪಿಸಿ ಸೆಕ್ಷನ್ 306 ಅನ್ವಯವಾಗಬೇಕಾದಲ್ಲಿ ಆತ್ಮಹತ್ಯೆಗೆ ಪ್ರಚೋದನೆಯೇ ಮುಖ್ಯ ಕಾರಣವೆಂದು ದೃಢಪಡಬೇಕು. ಬೇರೆ ದಾರಿ ಇಲ್ಲದೆ ಆತ್ಮಹತ್ಯೆ ದಾರಿ ಹಿಡಿದರೆಂದು ಸಾಬೀತುಪಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

Check Also

ಮಂಗಳೂರು/ಉಡುಪಿ: ಅವಳಿ ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ -ಮರವಂತೆಯಲ್ಲಿ ತ್ರೀವಗೊಂಡ ಕಡಲ್ಕೊರೆತ

ಮಂಗಳೂರು/ಉಡುಪಿ:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶನಿವಾರ ಧಾರಾಕಾರ ಮಳೆಯಾಗಿದೆ.ಕೊಡಾಜೆ-ಅನಂತಾಡಿ ರಸ್ತೆಯ ಗೋಳಿಕಟ್ಟೆ ಎಂಬಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು …

Leave a Reply

Your email address will not be published. Required fields are marked *

You cannot copy content of this page.