ಕಾಪು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಮಹಾಲಸಾ ಟ್ರೇಡರ್ಸ್ ಹಾಲಿನ ಅಂಗಡಿ, ಮುಚ್ಚಿವ ವೇಳೆಗೆ ಹಾಲು ಖರೀದಿ ನೆಪದಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ನಾಲ್ವರು ಮಾಲಕನಿಂದ ಆರು ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಕಾಪು ಮಹಾಲಸಾ ಸ್ಟೋರ್ ಮಾಲಕ ರಾಘವೇಂದ್ರ ಕಿಣಿ ಹಣ ಕಳೆದುಕೊಂಡಿದ್ದು, ಕಾಪು ಪೊಲೀಸ್ ಠಾಣೆಗೆ ಹಣ ಕಳೆದುಕೊಂಡ ಬಗ್ಗೆ ದೂರು ನೀಡಿದ್ದಾರೆ.
ಗುರುವಾರ ರಾತ್ರಿ ಮಳಿಗೆಗೆ ಬೀಗ ಹಾಕಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದರು. 3-4 ದಿನದ ವ್ಯವಹಾರದ ಸುಮಾರು 6 ಲಕ್ಷ ರೂ. ನಗದನ್ನು ಸ್ಕೂಟಿಯಲ್ಲಿ ಇರಿಸಿದ್ದರು. ಈ ವೇಳೆ ಗ್ರಾಹಕನ ಸೋಗಿನಲ್ಲಿ ಬಂದ ಅಪರಿಚಿತ ಈ ದುಷ್ಕೃತ್ಯವೆಸಗಿದ್ದಾನೆ. ನಾಲ್ವರಲ್ಲಿ ಒಬ್ಬಾತ ಬಂದು ಹಾಲಿನ ಪ್ಯಾಕೆಟ್ ಕೇಳಿದ್ದು ಊಳಿದವರು ದೂರದಲ್ಲಿ ನಿಂತು ಇನ್ನು ಸ್ಕೂಟರ್ ಟಯರ್ ಪಂಕ್ಚರ್ ಮಾಡಿ , ಅದರ ಕೀ ಬಳಸಿ ಸೀಟಿನ ಕೆಳಗೆ ಇಟ್ಟಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಆರು ಲಕ್ಷ ರೂ. ಹಣ ಎಗರಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಬೆರಳಚ್ಚು, ಶ್ವಾನದಳ ಸಹಿತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 3-4 ಮಂದಿ ಕಳ್ಳರ ಕೃತ್ಯವೆಂದು ಶಂಕಿಸಲಾಗಿದ್ದು ಮಹಾಲಸಾ ಸ್ಟೋರ್ ಮತ್ತು ಸುತ್ತಲಿನ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದಾರೆ. ಇವರ ಚಲನವಲನ ಗಮನಿಸಿಯೇ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ.