

ಉಡುಪಿ: ಮಲ್ಪೆಯಿಂದ ಬೋಟ್‌ನಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬಡಾನಿಡಿಯೂರು ಗ್ರಾಮದ ರಮೇಶ ಟಿ.(52) ಎಂಬುವರು ಮೃತಪಟ್ಟಿದ್ದಾರೆ.
ಮಂಗಳವಾರ ನಸುಕಿನ ಜಾವ 5ಕ್ಕೆ ಬೋಟ್‌ನಲ್ಲಿ ಹಾಕಿದ್ದ ಬಲೆಯ ಪರಿ ಕಟ್ಟುವಾಗ ತಲೆಸುತ್ತು ಬಂದು ಬಿದ್ದಿದ್ದರು. ಚಿಕಿತ್ಸೆಗಾಗಿ ಕೂಡಲೇ ಮಲ್ಪೆಯ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ತರಲಾಗಿತ್ತು. ಪರೀಕ್ಷಿಸಿದ ವೈದ್ಯರು ರಮೇಶ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸಹೋದರ ನಿತ್ಯಾನಂದ ನೀಡಿದ ದೂರಿಂನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.