ಬಿಹಾರದ ಸಮಸ್ತಿಪುರದ ಶುಕ್ಲಾ ದೇವಿ ಎಂಬ 32 ವರ್ಷದ ಮಹಿಳೆ ತನ್ನ ಅತ್ತಿಗೆ ಅಂದರೆ ಪತಿಯ ಸಹೋದರಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಈಕೆ 10 ವರ್ಷಗಳ ಹಿಂದೆ ಪ್ರಮೋದ್ ದಾಸ್ ಎಂಬುವವನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ದಶಕದ ಕಾಲ ಪುರುಷನೊಂದಿಗೆ ಇದ್ದ ನಂತರ ಈಗ 18 ವರ್ಷದ ಅತ್ತಿಗೆಯನ್ನೇ ವರಿಸಿದ್ದಾಳೆ !
ನಾವು ಪರಸ್ಪರ ಪ್ರೀತಿಸಿದ್ದರಿಂದ ಮದುವೆಯಾಗಿದ್ದೇವೆ. ನನಗೆ ಅತ್ತಿಗೆಯ ಮೇಲೆ ಮೋಹ ಹುಟ್ಟಿತು. ಅದಕ್ಕಾಗಿಯೇ ಗಂಡನನ್ನು ಬಿಟ್ಟು ಅತ್ತಿಗೆಯನ್ನು ಮದುವೆಯಾಗಿದ್ದೇನೆ ಎಂದು ಶುಕ್ಲಾ ದೇವಿ ಹೇಳಿದ್ದು, ಮದುವೆಯಾದ ನಂತರ ನಾವು ತುಂಬಾ ಸಂತೋಷವಾಗಿದ್ದೇವೆ ಎಂದಿದ್ದಾಳೆ.
ಪತ್ನಿ ಸಂತೋಷವಾಗಿದ್ದರೆ ನಾನೂ ಸಂತೋಷವಾದಂತೆ. ಅವರಿಬ್ಬರೂ ಪ್ರೀತಿಸಿ ಮದುವೆಯಾಗಿರುವ ಕಾರಣ, ನನಗೆ ಏನೂ ಸಮಸ್ಯೆ ಇಲ್ಲ ಎಂದು ಪತಿ ಕೂಡ ಹೇಳಿದ್ದು, ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಮದುವೆಯ ಬಳಿಕ ಸೂರಜ್ ಕುಮಾರ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡಿರುವ ಶುಕ್ಲಾ ದೇವಿ ಪುರುಷನಂತೆ ಹೇರ್ ಕಟ್ ಮಾಡಿಕೊಂಡಿದ್ದಾಳೆ. ಪುರುಷನ ಜೊತೆ 10 ವರ್ಷ ಬಾಳಿ ನಂತರ ಸ್ತ್ರೀಯನ್ನು ಮೋಹಿಸಿರುವ ವಿಷಯ ಬಹುತೇಕ ಎಲ್ಲರಿಗೂ ಅರಗಿಸಿಕೊಳ್ಳುವುದು ಕಷ್ಟವಾಗಿದೆ.