

ಹದಿಹರೆಯದ ಪ್ರತಿಭಾನ್ವಿತ ವಿದ್ಯಾರ್ಥಿಯಾದ ನಿಖಿತಾ ಅನಾರೋಗ್ಯಕ್ಕೆ ಸಂಬಂಧಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು,ವೈದ್ಯಕೀಯ ಲೋಪದಿಂದ ಆಕೆ ಮೃತಪಟ್ಟಿರುವುದಾಗಿ ಮನೆಯವರು ತಿಳಿಸಿದ್ದಾರೆ.
ಇದೊಂದು ಆಘಾತಕಾರಿ ಸಂಗತಿಯಾಗಿದ್ದು ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು ಎಂಬುದು ನಮ್ಮ ಕಳಕಳಿ.ಸಹೋದರಿ ನಿಖಿತಾ ಆತ್ಮಕ್ಕೆ ಶ್ರದ್ಧಾಂಜಲಿ ಪ್ರಾರ್ಥಿಸುತ್ತಾ,ಈ ಕುರಿತು ಸಂತಾಪ ಸೂಚಿಸುತ್ತೇವೆ.
ಆಸ್ಪತ್ರೆಯ ನಿರ್ಲಕ್ಷ್ಯದಿಂದ ಕಳೆದುಕೊಂಡು ದುಃಖದಲ್ಲಿರುವ ಮನೆಯವರಿಗೆ ಸಮಗ್ರವಾದ ತನಿಖೆಯನ್ನು ನಡೆಸಿ ಸೂಕ್ತ ನ್ಯಾಯವನ್ನು ಒದಗಿಸಿಕೊಟ್ಟು ಮತ್ತು ಅವರ ಕುಟುಂಬಕ್ಕೆ ಪರಿಹಾರ ಧನವನ್ನು ನೀಡಬೇಕೆಂಬುದನ್ನು ಆಗ್ರಹಿಸಿರುತ್ತೇವೆ ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿಗಳು ಎರಡು ದಿನಗಳ ಕಾಲಾವಕಾಶವನ್ನು ಕೇಳಿರುತ್ತಾರೆ ಈ ಸಂದರ್ಭದಲ್ಲಿ ಕುಲಾಲ ಕುಂಬಾರ ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ದಿವಾಕರ್ ಬಂಗೇರ ಯುವ ವೇದಿಕೆ ನಾಯಕರುಗಳಾದ ಸಂತೋಷ್ ಕುಲಾಲ್ ಪಕ್ಕಾಳು ಸುರೇಂದ್ರ ಕುಲಾಲ್ ಬಸವರಾಜ್ ಕುಲಾಲ್ ಉದಯ್ ಕುಲಾಲ್ ಕಾಪು ಪೆರಡೂರುಕುಲಾಲ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಕುಲಾಲ್ ಶಂಕರ್ ಕುಲಾಲ್ ಸುಧಾಕರ್ ಕುಲಾಲ್ ಹರೀಶ್ ಉದಯ್ ಕುಲಾಲ್ ಕಾಪು ಕುಲಾಲ ಸಂಘದ ಅಧ್ಯಕ್ಷರಾದ ಸಂದೀಪ್ ಬಂಗೇರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.