

ಗುಡಿವಾಡ(ಆಂದ್ರಪ್ರದೇಶ): ಯುವತಿಯೊಬ್ಬಳು ತನ್ನ ಫೇಸ್‌ಬುಕ್ ಫ್ರೆಂಡ್ ಮುಂದೆ ಬೆತ್ತಲಾಗಿದ್ದು, ಇದೀಗ ಆಕೆಗೆ ನಿಶ್ಚಯವಾಗಿದ್ದ ಮದುವೆ ಕ್ಯಾನ್ಸಲ್ ಆಗಿರುವ ಘಟನೆ ಗುಡಿವಾಡದಲ್ಲಿ ನಡೆದಿದೆ.
ಮದುವೆ ಕ್ಯಾನ್ಸಲ್ ಆದ ಬಗ್ಗೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡಿವಾಡ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಘಟನೆ ಕುರಿತು ಇನ್ನಷ್ಟು ಸಂಗತಿಗಳು ಬೆಳಕಿಗೆ ಬಂದಿದ್ದು ಸಮಾಜ ಬಾಂಧವರ ಆತಂಕಕ್ಕೆ ಕಾರಣವಾಗಿದೆ.
ಗುಡಿವಾಡ ಪಟ್ಟಣದ ಬಂಟುಮಿಲ್ಲಿ ರಸ್ತೆಯ ಯುವತಿಗೆ ಫೇಸ್ ಬುಕ್ ಮೂಲಕ ನ್ಯೂಟ್ರಾನ್ ಬಾಬು ಎಂಬುವನ ಪರಿಚಯವಾಗಿದೆ. ಅವರಿಬ್ಬರ ನಡುವೆ ಆತ್ಮೀಯತೆ ಹೆಚ್ಚಾದಂತೆ, ಅವನ ಕೋರಿಕೆಯಂತೆ ಅವಳು ವಿಡಿಯೋ ಕರೆಯಲ್ಲಿ ಬೆತ್ತಲಾಗಿದ್ದಾಳೆ. ಈ ವಿಡಿಯೋವನ್ನು ನ್ಯೂಟ್ರಾನ್ ಬಾಬು ರೆಕಾರ್ಡ್ ಮಾಡಿಕೊಂಡಿದ್ದ.
ಮತ್ತೊಂದೆಡೆ, ಆಕೆಯ ಕುಟುಂಬಸ್ಥರು ಏಲೂರು ಜಿಲ್ಲೆಯ ಮಂಡವಳ್ಳಿಯ ಗುರ್ರಂ ಪರಮಜ್ಯೋತಿ ಅವರೊಂದಿಗೆ ಮದುವೆಯನ್ನು ಏರ್ಪಡಿಸಿದರು. ಇದೇ ತಿಂಗಳ 14ರಂದು ಇಬ್ಬರೂ ವಿವಾಹವಾಗಬೇಕಿತ್ತು. ಯುವತಿ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರ ತಿಳಿದ ಫೇಸ್ ಬುಕ್ ಗೆಳೆಯ ನ್ಯೂಟ್ರಾನ್ ಬಾಬು ಆಕೆಯ ನಗ್ನ ವೀಡಿಯೋವನ್ನು ವರ ಗುರ್ರಂ ಪರಮಜ್ಯೋತಿಗೆ ಕಳುಹಿಸಿದ್ದ. ಮದುವೆ ನಿಶ್ಚಯಿಸಿದ ಹಿರಿಯರಿಗೆ ಪರಮಜ್ಯೋತಿ ವಿಡಿಯೋ ಕಳುಹಿಸಿ ಮದುವೆಯಾಗಲು ನಿರಾಕರಿಸಿದ್ದಾನೆ.
ಮತ್ತೊಂದೆಡೆ, ನ್ಯೂಟನ್ ಬಾಬು ಅವರ ಸಂಬಂಧಿಕರಾದ ಬಾಪಟ್ಲ ಕೋಟೇಶ್ವರ ರಾವ್ ಮತ್ತು ಕೊಂಡ್ರು ರಣಧೀರ್ ವಿಡಿಯೋವನ್ನು ಇತರರಿಗೆ ಕಳುಹಿಸಿ ವೈರಲ್ ಮಾಡಿದ್ದಾನೆ. ಘಟನೆ ಕುರಿತು ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.