
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್ ಎಲ್ ಪಿಎಸ್ -2ರ 80 ಎಂಎಲ್ ಡಿ ಸ್ಥಾವರದಲ್ಲಿ ಎಚ್ ಎಲ್ ಪಿಎಸ್ 18 ಎಂಜಿಡಿ ಯಲ್ಲಿ ಫೆ. 24ರಂದು ಮೆಸ್ಕಾಂ ನವರ ತುರ್ತು ದುರಸ್ತಿ ಕಾಮಗಾರಿ ನಡೆಯಲಿದೆ.
ಅಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆಯ ವರೆಗೆ ಮಂಗಳೂರು ನಗರಕ್ಕೆ ನೀರು ಸರಬರಾಜು ಸಂಪೂರ್ಣವಾಗಿ ನಿಲುಗಡೆ ಮಾಡುವುದರಿಂದ, ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮನಪಾ ಕಾರ್ಯಪಾಲಕ ಅಭಿಯಂತ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
