May 5, 2025
WhatsApp Image 2024-02-23 at 11.29.55 AM
ಗಿನ ಮಕ್ಕಳಿಗೆ ಪರೀಕ್ಷೆ ಎಂದರೆ ಅಗ್ನಿಪರೀಕ್ಷೆ. ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಮಕ್ಕಳ ಪರೀಕ್ಷೆ ತಯಾರಿಯು ಜೋರಾಗಿಯೇ ಇರುತ್ತದೆ. ಈ ಸಮಯದಲ್ಲಿ ತಾಯಂದಿರು ಓದು ಓದು ಎಂದು ಮಕ್ಕಳ ಹಿಂದೆಯೇ ಸುತ್ತುತ್ತಿರುತ್ತಾರೆ. ಆದರೆ ಕೆಲವು ಮಕ್ಕಳಿಗೆ ಎಷ್ಟು ಓದಿದರೂ ನೆನಪಿನಲ್ಲಿ ಉಳಿಯುವುದೇ ಇಲ್ಲ.

ಕೆಲ ಮಕ್ಕಳಂತೂ ಚೆನ್ನಾಗಿ ಓದಿಕೊಂಡಿದ್ದರೂ ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣವೇ ಬ್ಲಾಂಕ್ ಆಗಿ ಬಿಡುತ್ತಾರೆ. ಓದಿದ್ದೆಲ್ಲವು ಮರೆತು ಹೋಗಲು ಕಾರಣಗಳು ಹಲವಾರಾಗಿದ್ದರೂ, ಆರಾಮದಾಯಕವಾಗಿ ಪರೀಕ್ಷೆ ಎದುರಿಸುವತ್ತ ಗಮನ ಹರಿಸಬೇಕು.ಮಾರ್ಚ್ ತಿಂಗಳು ಆರಂಭವಾಗುತ್ತಿದ್ದಂತೆ ಸಣ್ಣ ಮಕ್ಕಳಿಂದ ಹಿಡಿದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗುತ್ತದೆ. ಈ ಸಮಯದಲ್ಲಿ ಪೂರ್ವ ತಯಾರಿಯು ಚೆನ್ನಾಗಿ ನಡೆಸಿದರೆ ಪರೀಕ್ಷೆಗೆ ಭಯ ಪಡಬೇಕಾದ ಅಗತ್ಯವಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪರೀಕ್ಷೆ ಎಂದರೆ ಹೆತ್ತವರ ಒತ್ತಡ ಹಾಗೂ ಸಂಬಂಧಿಕರು ಭಯ ಪಡಿಸುವುದು ಹೆಚ್ಚಾಗಿದೆ. ಒತ್ತಡದಿಂದ ಮಕ್ಕಳು ತಯಾರಿಯ ವೇಳೆ ಹಾಗೂ ಪರೀಕ್ಷೆ ಸಮಯದಲ್ಲಿ ಹೆದರಿಕೊಳ್ಳುತ್ತಾರೆ. ಕೆಲವರೂ ಚೆನ್ನಾಗಿ ಓದಿ ಕೊಂಡಿದ್ದರೂ ಪರೀಕ್ಷೆಯನ್ನು ಒಂದೆರಡು ಘಂಟೆಗಳ ಮುಂಚೆ ಓದಿದ ವಿಷಯಗಳು ನೆನಪಿಗೆ ಬರುವುದೇ ಇಲ್ಲ.

ಓದಿದ್ದೆಲ್ಲವೂ ಮರೆತು ಹೋಗಲು ಕಾರಣಗಳಿವು

* ಭಯ ಪಡುವುದು : ಪರೀಕ್ಷೆ ಎಂದರೇನೇ ಭಯ. ಈ ಸಮಯದಲ್ಲಿ ಕಡಿಮೆ ಅಂಕ ಬಂದರೆ, ಫೇಲ್ ಆದರೆ ಹೀಗೆ ನಾನಾ ರೀತಿಯ ಆಲೋಚನೆಗಳು ಓದುವ ಸಮಯದಲ್ಲಿ ಬರುತ್ತದೆ. ಹೀಗಾದಾಗ ಓದಿದ್ದೆಲ್ಲವು ನೆನಪಿನಲ್ಲಿ ಉಳಿಯುವುದೇ ಇಲ್ಲ. ಪರೀಕ್ಷೆ ಕೊಠಡಿಗೊಳಗೇ ಹೋದಾಗಲು ಮಕ್ಕಳಲ್ಲಿ ಭಯವೇ ಇದ್ದರೆ ಓದಿದ್ದೆಲ್ಲವು ನೆನಪಿಲ್ಲದ್ದಂತಾಗುತ್ತದೆ.

* ಬಾಯಿಪಾಠ ಮಾಡುವ ಅಭ್ಯಾಸ: ಹೆಚ್ಚಿನ ಮಕ್ಕಳು ವಿಷಯವು ಅರ್ಥವಾಗುವುದಿಲ್ಲ ಎಂದು ಇಲ್ಲವಾದರೆ ಓದಿದ್ದೆಲ್ಲವೂ ನೆನಪಿನಲ್ಲಿ ಉಳಿಯಬೇಕು ಎಂದು ಬಾಯಿಪಾಠ ಮಾಡುತ್ತಾರೆ. ಈ ರೀತಿಯಾಗಿ ಅಭ್ಯಾಸ ಮಾಡಿದರೆ ಓದಿದ್ದೆಲ್ಲವು ನೆನಪಿನಲ್ಲಿ ಉಳಿಯುವುದು ಕಷ್ಟ. ಹೀಗಾಗಿ ಓದುವ ಸಮಯದಲ್ಲಿ ವಿಷಯವನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿತರೆ ಒಳ್ಳೆಯದು.

* ಓದುವ ವೇಳೆ ಮೊಬೈಲ್ ಬಳಕೆ : ಇಂದಿನ ಮಕ್ಕಳಿಗೆ ಓದುವ ಸಮಯದಲ್ಲಿಯು ಮೊಬೈಲ್ ಹತ್ತಿರ ಇರಲೇಬೇಕು. ಓದುತ್ತ ಮೊಬೈಲ್ ನೋಡುವುದು, ಹೀಗೆ ಮೊಬೈಲ್ ಬಳಕೆ ಮಾಡುವುದರಿಂದ ಓದಿನ ಕಡೆಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾದಾಗ ಓದಿದ ಯಾವ ವಿಷಯವು ನೆನಪಿರದೆ ಮರೆತು ಬಿಡುತ್ತಾರೆ.

* ಮುಖ್ಯ ವಿಷಯಗಳನ್ನು ನೋಟ್ ಮಾಡಿಕೊಳ್ಳದೇ ಇರುವುದು : ಪರೀಕ್ಷಾ ಪೂರ್ವ ತಯಾರಿಯ ಸಮಯದಲ್ಲಿ ಬಹಳ ಮುಖ್ಯವಾದ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕು. ಓದಿದ್ದೆಲ್ಲವು ಮರೆತುಹೋದಾಗ ಟಿಪ್ಪಣಿ ಮಾಡಿಕೊಂಡ ಅಂಶಗಳನ್ನು ಗಮನಿಸಿದಾಗ ಆ ವಿಷಯಗಳನ್ನು ಮತ್ತೆ ನೆನಪಿಸಿಕೊಳ್ಳಬಹುದು.

* ವಾತಾವರಣವು ಪ್ರಶಾಂತವಾಗಿಲ್ಲದಿರುವುದು : ಮಕ್ಕಳು ಓದುವ ಸ್ಥಳವು ಕೂಡ ಓದಿದ್ದೆಲ್ಲವು ನೆನಪಿನಲ್ಲಿ ಉಳಿಯಲು ಕಾರಣವಾಗುತ್ತದೆ. ಗಲಾಟೆ, ಗದ್ದಲಗಳಿಂದ ಕೂಡಿದ ವಾತಾವರಣದಲ್ಲಿ ಓದಿದರೆ ಯಾವ ವಿಷಯವು ತಲೆಗೆ ಹತ್ತುವುದೇ ಇಲ್ಲ. ಹೀಗಾಗಿ ಸುತ್ತಲಿನ ವಾತಾವರಣವು ಪ್ರಶಾಂತವಾಗಿರುವುದು ಮುಖ್ಯವಾಗುತ್ತದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>