

ಕೋಟ: ಆಟವಾಡುತ್ತಿದ್ದ ವೇಳೆ ಗೆಸ್ಟ್‌ಹೌಸ್‌ನ ಗೇಟ್ ಮೈ ಮೇಲೆ ಬಿದ್ದು ಮಗು ಮೃತಪಟ್ಟಿರುವ ದಾರುಣ ಘಟನೆ ಕೋಟದ ಕೋಟತಟ್ಟು ಪಡುಕರೆಯಲ್ಲಿ ನ. 21 ರ ಸಂಜೆ ನಡೆದಿದೆ.
ಸ್ಥಳೀಯ ನಿವಾಸಿಯಾಗಿರುವ ಸುಧೀರ್ ಮೊಗವೀರ ಹಾಗೂ ಶಾರದ ದಂಪತಿಗಳ ಅವರ ಏಕೈಕ ಪುತ್ರ, ಮೂರು ವರ್ಷದ ಸುಶಾಂತ್ ಮೃತಪಟ್ಟ ಮಗು.
ಮನೆಯ ಸಮೀಪವಿರುವ ಗೆಸ್ಟ್‌ಹೌಸ್‌ನ ಗೇಟ್ ಬಳಿ ಮಗು ಪ್ರತಿದಿನ ಆಟವಾಡುತ್ತಿದ್ದು, ಅದೇ ರೀತಿ ನಿನ್ನೆ ಕೂಡ ಇನ್ನೊಂದು ಮಗುವಿನೊಂದಿಗೆ ಆಟವಾಡುತ್ತಿದ್ದಾಗ ಸ್ಲೈಡಿಂಗ್ ಗೇಟ್ ಕಳಚಿ ಮೈಮೇಲೆ ಬಿದ್ದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದೆ.
ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.