

ಬೆಳ್ತಂಗಡಿ : ವಿವಾಹಿತ ಮಹಿಳೆಯೊಬ್ಬರು ರಾತ್ರಿಯ ವೇಳೆ ಬಚ್ಚಲು ಮನೆಗೆ ಸ್ನಾನಕ್ಕೆಂದು ಹೋದಾಗ ನೆರೆಮನೆಯ ಯುವಕನೊಬ್ಬ ಅಕ್ರಮ ಪ್ರವೇಶ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಅನುಚಿತವಾಗಿ ವರ್ತಿಸಿದ ಘಟನೆ ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪಕ್ಕದ ಮನೆಯ ನಿವಾಸಿ ಮನೋಜ್ ಎಂಬಾತನೇ ಅನುಚಿತವಾಗಿ ವರ್ತಿಸಿದ್ದು. ಮಹಿಳೆ ಬೊಬ್ಬೆ ಹೊಡೆದಿದ್ದು ಮನೆಯವರು ಹೊರಬರುವ ವೇಳೆಗೆ ಆರೋಪಿ ಓಡಿ ತಪ್ಪಿಸಿಕೊಂಡಿದ್ದಾನೆ. ಆರೋಪಿ ವಿರುದ್ದ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 448,354,509ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.