

ಮಂಗಳೂರು: ಮಂಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರ ಗಡಿಪಾರು ವಿಚಾರವಾಗಿ ಮಾತನಾಡಿರುವ ಭಜರಂಗದಳದ ಪುನೀತ್ ಅತ್ತಾವರ, ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಲ್ಲಿ ತನಕ ಪೊಲೀಸರಿಗೆ ಸೂಚನೆ ನೀಡಿ ನಡೆಯುತ್ತಿದ್ದೆವು. ಇನ್ಮುಂದೆ ನಾವೇ ನೇರವಾಗಿ ಅಕ್ರಮ ತಡೆಯುತ್ತೇವೆ.
ಇನ್ನು ಪೊಲೀಸರಿಗೆ ಯಾವುದೇ ಮಾಹಿತಿ ನೀಡೋದಿಲ್ಲ. ಬಜರಂಗದಳ ಮುಖಂಡ ಪುನೀತ್ ಅತ್ತಾವರ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ತುಷ್ಟಿ ಕರಣ ನೀತಿ ಮಾಡುತ್ತಿದೆ ಮೊದಲು ಬಜರಂಗದಳದ ನಿಷೇಧದ ಬಗ್ಗೆ ಮಾತಾಡ್ತಿತ್ತು ಈಗ ಬಜರಂಗದಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಬಜರಂಗದಳ ಮುಖಂಡ ಪುನೀತ್ ಅತ್ತಾವರ ಆರೋಪ ಮಾಡಿದ್ದಾರೆ.