ಯಾದಗಿರಿ: ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಫಯಾಜ್ ಎಂಬಾತ ಯಾದಗಿರಿ ನಗರದಲ್ಲಿ ದಲಿತ ಯುವಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಯಾದಗಿರಿ ನಗರದ ಶಹಾಪುರಪೇಟೆಯ ಯುವಕ ರಾಕೇಶ್ (22) ಮೃತಪಟ್ಟ ಯುವಕ. ರವಿವಾರ ರಾತ್ರಿ ರಾಕೇಶ್ ರೊಟ್ಟಿ ಕೇಳಿದಕ್ಕೆ ನಡೆದ ಮಾತಿನ ಚಕಮಕಿಯಿಂದಾಗಿ ಫಯಾಜ್ ರಾಕೇಶನ ಮನೆಗೆ ನುಗ್ಗಿ ಮಲಗಿದ್ದ ಯುವಕನ ಗುಪ್ತಾಂಗಕ್ಕೆ ಒದ್ದು ಕೊಲೆ ಮಾಡಿದ್ದಾನೆ.
ಪ್ರತಿ ನಿತ್ಯ ರಾಕೇಶ ಎಂಬಾತ ರೊಟ್ಟಿ ಕೇಂದ್ರಗಳಿಗೆ ಅಥವಾ ಅಕ್ಕ-ಪಕ್ಕದ ಮನೆಯಲ್ಲಿ ರೊಟ್ಟಿ ಕೇಳಿ ಪಡೆದು ಊಟ ಮಾಡುತ್ತಿದ್ದು, ರವಿವಾರ ರಾತ್ರಿ ಸಹ ರೊಟ್ಟಿ ಪಡೆಯಲು ತೆರಳಿದ್ದಾಗ ರೊಟ್ಟಿ ಕೇಂದ್ರದ ಬಳಿ ಫಯಾಜ್ ಹಾಗೂ ಆತನ ಸ್ನೇಹಿತರೊಡನೆ ಮಾತಿನ ಚಕಮಕಿಯಾಗಿದೆ. ಈ ಹಿನ್ನೆಲೆ ರಾತ್ರಿ 11 ಗಂಟೆಗೆ ಫಯಾಜ್ ರಾಕೇಶ್ ಮನೆಗೆ ಧಾವಿಸಿ ಒದ್ದು ಕೊಲೆ ಮಾಡಿದ್ದಾನೆ.
ಕೊಲೆಯಾದ ಯುವಕನ ತಾಯಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಸ್ವರೂಪ ತೀವ್ರಗೊಂಡ ಹಿನ್ನೆಲೆಯಲ್ಲಿ ಯಾದಗಿರಿ ಎಸ್.ಪಿ ಜಿ.ಸಂಗೀತಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರೋಣತ್ತರ ಪರೀಕ್ಷಗೆ ತೆಗೆದುಕೊಂಡು ಹೋಗಲಾಯಿತು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.