March 22, 2026
WhatsApp Image 2026-03-22 at 11.27.47 AM

ಕಳೆದ ವರ್ಷ ನಡೆದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮತ್ತು ಮುತ್ತಿನ ಮಾಲೆಗಳನ್ನು ಮಾರುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದು ತನ್ನ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದು, ರಾತ್ರೋರಾತ್ರಿ ಫೇಮಸ್ ಆದಳು. ಎಷ್ಟರಮಟ್ಟಿಗೆ ಅಂದರೆ, ಬಾಲಿವುಡ್ನಿಂದ ಸಿನಿಮಾ ಅವಕಾಶ ಪಡೆಯುವಷ್ಟು. ಇದೇ ಮೊನಾಲಿಸಾ ಇದೀಗ ತನ್ನ ವೈಯಕ್ತಿಕ ಜೀವನ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದಾಳೆ.

ಮೊನಾಲಿಸಾ ಇತ್ತೀಚೆಗೆ ಉತ್ತರ ಪ್ರದೇಶ ಮೂಲದ ಫರ್ಮಾನ್ ಖಾನ್ ಎಂಬ ಯುವಕನನ್ನು ಮದುವೆಯಾಗಿದ್ದಾಳೆ. ಇಬ್ಬರದು ಪ್ರೇಮ ವಿವಾಹ. ಕೇರಳದಲ್ಲಿ ಮದುವೆಯಾದರು. ಇದೊಂದು ಅಂತರ್ಧಮೀಯ ಮದುವೆಯಾಗಿದ್ದು, ಲವ್ ಜಿಹಾದ್ ಎಂಬ ಆರೋಪದಿಂದಾಗಿ ವಿವಾದಕ್ಕೆ ಗುರಿಯಾಯಿತು. ಆದರೆ, ತಾನು ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಮೊನಾಲಿಸಾ ಹೇಳಿಕೆ ನೀಡಿದ ಬಳಿಕ ವಿವಾದ ತಣ್ಣಾಗಾಗುತ್ತದೆ ಎಂದು ಭಾವಿಸಿದ್ದರು.

ಆದರೆ, ಮತ್ತೊಂದು ವಿವಾದ ಭುಗಿಲೆದ್ದಿದೆ. ಅದೇನೆಂದರೆ, ಮೊನಾಲಿಸಾ ಇನ್ನು ಅಪ್ರಾಪ್ತೆ ಎಂಬ ಸುದ್ದಿ ಹರಿದಾಡುತ್ತಿದೆ. ಮೊನಾಲಿಸಾಗೆ ಇನ್ನೂ 18 ವರ್ಷ ವಯಸ್ಸಾಗಿಲ್ಲ, ಆಕೆಗಿನ್ನೂ 16 ವರ್ಷ ಎಂಬ ಹೊಸ ವಾದದೊಂದಿಗೆ ಅದಕ್ಕೆ ಸಾಕ್ಷಿಯಾಗಿ ಮಧ್ಯಪ್ರದೇಶ ಸರ್ಕಾರದ ಜನನ ಪ್ರಮಾಣಪತ್ರವನ್ನು ವಿಶ್ವ ಹಿಂದೂ ಪರಿಷತ್ ನೀಡಿದೆ. ಹೀಗಾಗಿ, ಇದೀಗ ಮೊನಾಲಿಸಾ ವಯಸ್ಸಿನ ವಿಚಾರದಲ್ಲಿ ವಿವಾದ ಹುಟ್ಟಿಕೊಂಡಿದೆ. ಅಲ್ಲದೆ, ಈ ಸಂಬಂಧ ಮಧ್ಯಪ್ರದೇಶದಲ್ಲಿ ದೂರು ಕೂಡ ದಾಖಲಾಗಿದೆ. ಅಂದಹಾಗೆ, ಇಂದೋರ್ ಮೂಲದ ಮೊನಾಲಿಸಾ ಮತ್ತು ಅವರ ಗೆಳೆಯ ಫರ್ಮಾನ್ ಖಾನ್ ಅವರ ವಿವಾಹ ಮಾರ್ಚ್ 11 ರಂದು ತಿರುವನಂತಪುರದ ಅರುಮನೂರ್ ನೈನಾರ್ ದೇವಾ ದೇವಸ್ಥಾನದಲ್ಲಿ ನಡೆಯಿತು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಚಿವ ವಿ. ಶಿವನ್‌ಕುಟ್ಟಿ, ಎ.ಎ. ರಹೀಮ್ ಸಂಸದ ಮತ್ತು ಇತರರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವಿವಾಹ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ನ ಪ್ರಧಾನ ಕಾರ್ಯದರ್ಶಿ ಅನಿಲ್ ವಿಲಾಯಿಲ್ ಅವರು 2025, ಜನವರಿ 21 ರಂದು ಮೊನಾಲಿಸಾ ತಮ್ಮ 16 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಎಂದು ಡಿಜಿಪಿಗೆ ದೂರು ನೀಡಿದ್ದರು.

ಆದಾಗ್ಯೂ, ಮದುವೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಇಬ್ಬರೂ ತಮ್ಮ ವಯಸ್ಸಿನ ಬಗ್ಗೆ ಆರೋಪಗಳನ್ನು ನಿರಾಕರಿಸಿದರು. ಅಲ್ಲದೆ, ಮೊನಾಲಿಸಾಗೆ 18 ವರ್ಷ ತುಂಬಿದೆ ಮತ್ತು ಇದನ್ನು ದೃಢಪಡಿಸಿದ ನಂತರವೇ ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಂಪನೂರು ಪೊಲೀಸರು ಬಹಿರಂಗಪಡಿಸಿದ್ದರು. ಮಧ್ಯಪ್ರದೇಶ ಸರ್ಕಾರದ ಹೆಸರಿನಲ್ಲಿರುವ ಜನನ ಪ್ರಮಾಣಪತ್ರದ ಪ್ರಕಾರ, ಈ ಹೇಳೆಕೆಗಳೆಲ್ಲ ಸುಳ್ಳು. ಜನನ ಪ್ರಮಾಣಪತ್ರದಲ್ಲಿ ಮೊನಾಲಿಸಾಳ ಜನ್ಮ ದಿನಾಂಕವನ್ನು 2009, ಡಿಸೆಂಬರ್ 30ರ ಸಂಜೆ 5.30ಕ್ಕೆ ದಾಖಲಿಸಲಾಗಿದೆ. ಇದರ ಪ್ರಕಾರ, ಮೊನಾಲಿಸಾಗೆ 16 ವರ್ಷ, ಎರಡು ತಿಂಗಳು ಮತ್ತು 12 ದಿನಗಳು. ಭೋಪಾಲ್‌ನಲ್ಲಿರುವ ವಿಎಚ್‌ಪಿ ಕಾರ್ಯಕರ್ತರು ಈ ಜನನ ಪ್ರಮಾಣಪತ್ರವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ ಎಂದು ಅನಿಲ್ ವಿಲಾಯಿಲ್ ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಮಧ್ಯಪ್ರದೇಶದಲ್ಲಿ ಪ್ರಕರಣ ಕೂಡ ದಾಖಲಿಸಲಿದೆ.

About The Author

Leave a Reply

Your email address will not be published. Required fields are marked *

You cannot copy content of this page.