ಸೀಮಿತ ವರ್ತಮಾನಕ್ಕೆ ಮಾತ್ರವಲ್ಲ, ಎಂದೆಂದಿಗೂ ಛಾಯಾಗ್ರಹಣದ ಪ್ರಾಮುಖ್ಯತೆ ನಿರಂತರವಾಗಿರುತ್ತದೆ. ಎಲ್ಲರ ಬದುಕಿನಲ್ಲಿ ಛಾಯಾಚಿತ್ರದ ಪಾತ್ರ ಬಹು ಮುಖ್ಯ. ಛಾಯಚಿತ್ರ ಕಲಾವಿದ ದಾಖಲೆಗಾರನು ಹೌದು ಎಂದು ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿತಿನ್ ಬೆಳುವಾಯಿ ಆಶಯ ವ್ಯಕ್ತಪಡಿಸಿದ್ದರು.
ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಹಾಗು ಮಲಬಾರ್ ಗೋಲ್ಡ್ & ಡೈಮಂಡ್ಸ್ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಕೆಮೆರಾ ಕ್ಲಿಕ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಛಾಯಾ ಹಾಗು ಮಾಧ್ಯಮ ಗೋಷ್ಠಿಯಲ್ಲಿ ಆಸ್ಟ್ರೋ ಮೋಹನ್, ಛಾಯಾ -ನೃತ್ಯ ಗೋಷ್ಠಿಯಲ್ಲಿ ಡಾ। ರಶ್ಮಿ ಗುರುಮೂರ್ತಿ ಮತ್ತು ಛಾಯಾ -ಕುಂಚ ವಿಷಯದಲ್ಲಿ ಡಾ ।ಜನಾರ್ದನ್ ಹಾವಂಜೆ ವಿಷಯ ಮಂಡಿಸಿದ್ದರು.
ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದೊಂದಿಗೆ ಆಯೋಜಿಸಿದ್ದ ಸೆಲ್ಫಿ ವಿಥ್ ತಿರಂಗ ಛಾಯಾಚಿತ್ರ ಸ್ಪರ್ಧೆಯ ಬಹುಮಾನವನ್ನು ಸಿದ್ದ ಬಸಯ್ಯ ಸ್ವಾಮಿ ಚಿಕ್ಕಮಠ ನೀಡಿದರು. ಉಡುಪಿ ವಲಯದ ಸಾರಥ್ಯವನ್ನು ವಹಿಸಿದ್ದ ಪೂರ್ವಾಧ್ಯಕ್ಷರುಗಳಾದ ಕೆ ವಾಸುದೇವ ರಾವ್, ಯು. ಕೆ ಭಾಸ್ಕರ್, ರಂಜನ್ ಕಟಪಾಡಿ, ಪ್ರಸನ್ನ ಹೆಬ್ಬಾರ್, ಹರೀಶ್ ಕೆಮ್ಮಣ್ಣು, ಶ್ರೀಧರ್ ಶೆಟ್ಟಿಗಾರ್, ಸುಂದರ ಪೂಜಾರಿ, ಸುಕುಮಾರ್ ಕುಕ್ಕಿಕಟ್ಟೆ, ವಾಮನ ಪಡುಕೆರೆ, ಅನಿಶ್ ಶೆಟ್ಟಿಗಾರ್, ಪ್ರಕಾಶ್ ಕೊಡಂಕೂರು ಇವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್. ಪಿ., ಪತ್ರಕರ್ತ ಮೋಹನ್ ಉಡುಪ ಹಂದಾಡಿ, ಕೊಡವೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಜ್ ರೆಹೆಮಾನ್, ಜಿಲ್ಲಾ ಕಾರ್ಯದರ್ಶಿ ವಾಮನ ಪಡುಕೆರೆ, ಪ್ರವೀಣ್ ಕೊರೆಯ, ಸುಧೀರ್ ಎಂ. ಶೆಟ್ಟಿ, ಪ್ರವೀಣ್ ಹೂಡೆ ಉಪಸ್ಥಿತರಿದ್ದರು. ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿದರು. ದಿವಾಕರ್ ಹಿರಿಯಡ್ಕ ವಂದಿಸಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಅಂಜಲಿ ಉಪಾಧ್ಯ ಕಂಬಳಕಟ್ಟ ಪ್ರಾರ್ಥಿಸಿದರು.