

ಸಾಮಾನ್ಯವಾಗಿ ಜನಿಸಿದ ಮಗುವಿಗೆ 9 ತಿಂಗಳು ಅಥವಾ ಕೆಲವರಿಗೆ ಬೆಳವಣಿಗೆ ಮೇಲೆ 10, 11 ಅಥವಾ ಒಂದು ವರ್ಷಗಳ ಬಳಿಕ ಒಂದರಿಂದ ಮೂರು ಹಲ್ಲುಗಳು ಬರುತ್ತದೆ. ಆದರೆ ವಿಚಿತ್ರ ಎಂಬಂತೆ ಇಲ್ಲೊಬ್ಬ ಮಗು 32 ಹಲ್ಲುಗಳೊಂದಿಗೆ ಹೊಟ್ಟಿದ್ದು, ಈ ಮಗುವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಗು ಹುಟ್ಟಿದ ಹಲವು ವರ್ಷಗಳು ಕಳೆದ ಬಳಿಕ ಆ ಮಗುವಿಗೆ ಸಂಪರ್ಣವಾಗಿ ಹಲ್ಲುಗಳು ಬರುತ್ತವೆ. ಆದರೆ ಇಲ್ಲೊಂದು ಮಗು 32 ಹಲ್ಲುಗಳೊಂದಿಗೆ ಜನಿಸಿದ್ದು, ನೋಡುಗರನ್ನು ಆಶ್ಚರ್ಯಕ್ಕೀಡು ಮಾಡಿದೆ. ಅಮೆರಿಕದ ಮಹಿಳೆಯೊಬ್ಬರು ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು ಬಹಳ ಅಪರೂಪದ ಘಟನೆ ಎಂದು ವೈದ್ಯರು ತಿಳಿಸಿದ್ದಾರೆ.
ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸಿಸುತ್ತಿರುವ ನಿಕಾ ದಿವಾ ಎಂಬ ಮಹಿಳೆ ತನ್ನ ನವಜಾತ ಶಿಶುವಿನ ಅಪರೂಪದ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಟಿಕ್‌ಟಾಕ್‌ನ ಸಹಾಯವನ್ನು ತೆಗೆದುಕೊಂಡಿದ್ದಾರೆ. ಮಗು ಜನಿಸುವಾಗಲೇ 32 ಹಲ್ಲುಗಳನ್ನು ಹೊಂದಿದ್ದು, ಈ ಬಗ್ಗೆ ಮಗುವಿನ ತಾಯಿ ಟಿಕ್‌ಟಾಕ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ಇದು ಭಾರೀ ವೈರಲ್ ಆಗುತ್ತಿದೆ.