March 14, 2026
WhatsApp Image 2023-07-20 at 11.57.20 AM

ಗುಜರಾತ್:‌ ಅಹಮದಾಬಾದ್‌ನ ಇಸ್ಕಾನ್ ಸೇತುವೆ ಬಳಿ ಕಾರು ಹರಿದು ಪೊಲೀಸ್‌ ಸಿಬ್ಬಂದಿಗಳು ಸೇರಿದಂತೆ 9 ಮಂದಿ ಮೃತಪಟ್ಟಿರುವ ಘಟನೆ ಜು.20 ರಂದು ನಡೆದಿದೆ.

ಸರ್ಖೇಜ್-ಗಾಂಧಿನಗರ (ಎಸ್‌ಜಿ) ಹೆದ್ದಾರಿಯಲ್ಲಿನ ಇಸ್ಕಾನ್ ಸೇತುವೆ ಬಳಿ ಥಾರ್ ಮತ್ತು ಡಂಪರ್ ಟ್ರಕ್‌ ನಡುವೆ ತಡರಾತ್ರಿ 1:30 ರ ಹೊತ್ತಿಗೆ ಅಪಘಾತವೊಂದು ಸಂಭವಿಸಿತ್ತು. ಈ ಅಪಘಾತವನ್ನು ನೋಡಲು ಪೊಲೀಸರು ಹತ್ತಾರು ಮಂದಿ ಸೇರಿದ್ದು, ಇದೇ ವೇಳೆ ಮತ್ತೊಂದು ಭೀಕರ ಘಟನೆ ನಡೆದಿದೆ.

ಇನ್ನು ವೇಗವಾಗಿ ಬಂದ ಜಾಗ್ವಾರ್‌ ಕಾರು ಅಪಘಾತದ ಸ್ಥಳದಲ್ಲಿ ನೆರದಿದ್ದ ಜನರ ಮೇಲೆ ಏಕಾಏಕಿ ಹರಿದಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿಗಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.

ಒಟ್ಟು 12 ಜನರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು ಅದರಲ್ಲಿ 9 ಮಂದಿ ಮೃತಪಟ್ಟಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.