March 7, 2026
download (1)
ಮಂಗಳುರು : ಜಾಗ ಕೊಡಿಸುವುದಾಗಿ ನಂಬಿಸಿದ ರಿಯಲ್ ಎಸ್ಟೇಟ್‌ ಏಜೆಂಟರು ಎಂದು ಹೇಳಿಕೊಂಡ ಇಬ್ಬರು ವ್ಯಕ್ತಿಗಳು ಎರಡು ಹಂತಗಳಲ್ಲಿ ಒಟ್ಟು 35 ಲಕ್ಷ ಮೊತ್ತ ಪಡೆದು ವ್ಯಕ್ತಿಯನ್ನು ವಂಚಿಸಿರುವುದರ ಬಗ್ಗೆ ಕೇಂದ್ರ ಅ‍‍ಪರಾಧ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ರೋಕರ್ ಹಾಗೂ ರಿಯಲ್ ಎಸ್ಟೇಟ್ ಏಜೆಂಟರು ಎಂದು ಹೇಳಿಕೊಂಡ ತಿಪ್ಪೇಸ್ವಾಮಿ ಮತ್ತು ಹರ್ಷವರ್ಧನ ಗೌಡ ಉಳ್ಳಾಲದಲ್ಲಿ ಜಾಗ ಮಾರಾಟಕ್ಕೆ ಇದ್ದು ಅದನ್ನು ಕೊಡಿಸುವುದಾಗಿ ಹೇಳಿ ದೂರುದಾರ ವ್ಯಕ್ತಿಯಿಂದ ಮೊದಲು ಆರ್‌ಟಿಜಿಎಸ್ ಮೂಲಕ 25 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದರು. ಮತ್ತೊಂದು ದಿನ 10 ಲಕ್ಷ ನಗದು ಪಡೆದುಕೊಂಡಿದ್ದರು. ತೋರಿಸಿದ ಜಾಗವನ್ನು ಹಣ ಸಿಕ್ಕದ ನಂತರ ತೆಗೆಯಿಸಿಕೊಡಲಿಲ್ಲ. ಹಣ ವಾಪಸ್ ಕೊಡುವಂತೆ ಕೇಳಿದಾಗ ತಿಪ್ಪೇಸ್ವಾಮಿ ಮತ್ತು ಹರ್ಷವರ್ಧನ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.