‘ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬರದಿರಲಿ’ – ಮಂಗಳೂರು ಪೊಲೀಸರ ಕಾರು ಬ್ಯಾನರ್‌ ವೈರಲ್..!

ಮಂಗಳೂರು: ಜೂ.11ರಂದು ಅಪಘಾತಕ್ಕೀಡಾದ ನ್ಯಾನೊ ಕಾರೊಂದನ್ನು ಕದ್ರಿ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದು, ಕಾರಿನಲ್ಲಿ ಅಳವಡಿಸಲಾದ ಬ್ಯಾನರ್ ನಲ್ಲಿ ವಿಮೆ ಮಾಡುವುದರ ಮಹತ್ವದ ಕುರಿತು ಪೊಲೀಸರು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕಾರಿಗೆ ವಿಮೆ ನವೀಕರಣದ ಬಗ್ಗೆ ಜಾಗೃತಿ ಮೂಡಿಸುವ ಬ್ಯಾನರ್ ಹಾಕಲಾಗಿದ್ದು, ‘ನನ್ನ ಮಾಲಿಕ ನನಗೆ ಇನ್ಸುರೆನ್ಸ್ ಮಾಡಿಸಿಲ್ಲ. ಜೂ.11ರಂದು ಯೆಯ್ಯಾಡಿಯಲ್ಲಿ ಮಾಲಿಕನು ನಿರ್ಲಕ್ಷ್ಯದಿಂದ ನನ್ನನ್ನು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾನೆ. ವಿಮೆ ಇಲ್ಲದ ಕಾರಣ ನನ್ನನ್ನು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಇಡಲಾಗಿದೆ. ನಾನು ಅನಾಥನಾಗಿದ್ದೇನೆ. ನನ್ನ ಪರಿಸ್ಥಿತಿ ಯಾರಿಗೂ ಬೇಡ ಎನ್ನುವ ಬ್ಯಾನರ್ ಅಳವಡಿಸಲಾಗಿದೆ.

ಕೆಪಿಟಿಯಿಂದ ಯೆಯ್ಯಾಡಿ ಕಡೆಗೆ ಬರುತ್ತಿದ್ದ ನ್ಯಾನೋ ಕಾರು ಶಕ್ತಿನಗರ ಕಡೆಗೆ ಬಲ ತಿರುವು ಪಡೆದು ಮೇರಿಹಿಲ್ ಕಡೆಯಿಂದ ಕೆಪಿಟಿ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹಸವಾರ ಗಾಯಗೊಂಡಿದ್ದರು.

ಕಾರು ಮಾಲೀಕರು ಅಪಘಾತದ ದಿನದಂದು ಬೆಳಿಗ್ಗೆ ವಿಮೆಯನ್ನು ನವೀಕರಿಸಿದ್ದರು, ಆದರೆ ಪಾಲಿಸಿಯು 12 ಗಂಟೆಯ ನಂತರ ಮಾತ್ರ ಅನ್ವಯಿಸುತ್ತದೆ. ವಿಮೆಯನ್ನು ನವೀಕರಿಸದ ಕಾರಣ ನ್ಯಾನೋ ಕಾರಿನ ಮಾಲೀಕರಿಗೆ ಮೃತರಿಗೆ ವಿಮೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಮಾಲೀಕನನ್ನು ವಾಮಂಜೂರಿನ ವಿನೋದ್ ಎಂದು ಗುರುತಿಸಲಾಗಿದೆ.

2023 ರಲ್ಲಿ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಒಟ್ಟು 80 ಐಎಂವಿ ಪ್ರಕರಣಗಳು ದಾಖಲಾಗಿವೆ, ಅವುಗಳಲ್ಲಿ 3 ವಿಮೆ ಇಲ್ಲ ಎಂದು ವರದಿಯಾಗಿದೆ.

ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 ಮತ್ತು 304(ಎ) ಅಡಿಯಲ್ಲಿ ಕಾರು ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

Check Also

ಕಾರವಾರ: ಮಳೆಗೆ ಗುಡ್ಡ ಕುಸಿದು ʻಕಾರವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ʼ ಬಂದ್ : ವಾಹನ ಸವಾರರ ಪರದಾಟ

ಕಾರವಾರ : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ಕಾರವಾರ-ಬೆಂಗಳುರು ರಾಷ್ಟ್ರೀಯ ಹೆದ್ದಾರಿ ಸಂಚಾರ …

Leave a Reply

Your email address will not be published. Required fields are marked *

You cannot copy content of this page.