ಮೈಸೂರು: ‘ದೇಶದಲ್ಲಿ ಮತ್ತೊಂದು ಪಾಕಿಸ್ತಾನ ಸೃಷ್ಟಿಗೆ ಪ್ರಯತ್ನವಾಗುತ್ತಿದ್ದು, ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲೂ ಅಂತಹ ಕೆಲಸ ನಡೆಯುತ್ತಿದೆ’ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು.
ಇಲ್ಲಿನ ಬನ್ನಿಮಂಟಪ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಗರದ ಶಾಖೆಗಳ ಏಕತ್ರಿಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನರಸಿಂಹರಾಜ ಕ್ಷೇತ್ರದಲ್ಲಿ ಇಂದು ನರಸಿಂಹರಾಜ ಹೋಗಿದ್ದಾನೆ. ಟಿಪ್ಪು ರಾಜನಾಗಿದ್ದಾನೆ. ದೇವಸ್ಥಾನಗಳನ್ನು ನಾಶ ಮಾಡಿದ, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ, ಹಿಂದೂ ವಿರೋಧಿಯಾಗಿದ್ದ ಟಿಪ್ಪುವನ್ನು ಹುಲಿ ಎಂದು ಕರೆಯುತ್ತಿದ್ದಾರೆ. ಆತನನ್ನು ರಾಜನನ್ನಾಗಿ ಮಾಡಲು ಹೊರಟಿದ್ದಾರೆ. ಇದು ಇಲ್ಲಿಗಷ್ಟೇ ಸೀಮಿತವಾದುದಲ್ಲ. ಇದೊಂದು ಚಿಂತನೆಯಾಗಿದ್ದು, ಇಂತಹ ಕೆಲಸಗಳು ದೇಶದ ಅಲ್ಲಲ್ಲಿ ನಡೆಯುತ್ತಿದೆ. ಮತಾಂತರವೆಂದರೆ ಚಿಂತನೆಯ ಬದಲಾವಣೆ ಮಾಡುವುದೇ ಆಗಿದೆ’ ಎಂದು ದೂರಿದರು.