ಮುಂಬೈ: ದೇಶದಲ್ಲಿ ಬ್ಯಾಂಕ್ ಸಾಲದ ಬಡ್ಡಿದರ ದುಬಾರಿಯಾಗಿದ್ದು, ಕೆಲವು ವರ್ಗದ ಜನರಿಗೆ ಒತ್ತಡವಾಗುತ್ತದೆ. ಹೀಗಾಗಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದ್ದಾರೆ.
ಎಸ್.ಬಿ.ಐ. ಆಯೋಜಿಸಿದ್ದ ವಾಣಿಜ್ಯ ಶೃಂಗದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಬ್ಯಾಂಕ್ ಸಾಲ ತುಂಬಾ ದುಬಾರಿಯಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಉದ್ದಿಮೆಗಳು ಚೆನ್ನಾಗಿ ಕೆಲಸ ಮಾಡಬೇಕೆಂದರೆ ಬ್ಯಾಂಕ್ ಸಾಲದ ಬಡ್ಡಿ ದರ ಕೈಗೆಟುಕುವಂತಿರಬೇಕು. ಹೀಗಾಗಿ ಬಡ್ಡಿ ದರ ಇಳಿಕೆ ಮಾಡಬೇಕು. ಬ್ಯಾಂಕುಗಳು ತಮ್ಮ ಮೂಲ ಭೂತ ಕರ್ತವ್ಯವಾದ ಸಾಲ ನೀಡಿಕೆ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.
ಅದೇ ರೀತಿ ಅಡ್ಡ ದಾರಿಯಲ್ಲಿ ಜನರಿಗೆ ವಿಮೆ ಉತ್ಪನ್ನ ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಅಡ್ಡ ದಾರಿಯಲ್ಲಿ ವಿಮೆ ಪಾಲಿಸಿ ಮಾರಾಟ ಮಾಡಬಾರದು ಎಂದು ಹೇಳಿದ್ದಾರೆ.