March 21, 2026
WhatsApp Image 2024-08-19 at 10.05.11 AM

ಮೂಡುಬಿದಿರೆ:  ವಿಳಾಸ ಕೇಳುವ ನೆಪದಲ್ಲಿ  ಮಹಿಳೆಯೊಬ್ಬರ ಚಿನ್ನದ ಸರ ಕಸಿದ ಘಟನೆ ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ಭಾನುವಾರ ನಡೆದಿದೆ.

ನಿರ್ಮಲಾ ಪಂಡಿತ್ ಅವರು ವಿವೇಕಾನಂದ ನಗರದಲ್ಲಿರುವ ಮಗಳ ಮನೆಯ ತೋಟದಲ್ಲಿದ್ದಾಗ ಮನೆಯ ಗೇಟ್‌ ಮುಂಭಾಗ ಇಬ್ಬರಿದ್ದ ಸ್ಕೂಟರ್ ನಿಂತಿತು. ಈ ಪೈಕಿ ಒಬ್ಬ ಮಹಿಳೆಯ ಬಳಿ ಬಂದು ಆರ್.ಕೆ.ಟ್ರೇಡರ್ಸ್ ಎಲ್ಲಿ ಎಂದು ಕೇಳಿದಾಗ ಮಹಿಳೆ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ನಂತರ ಆ ವ್ಯಕ್ತಿ ವಿಸಿಟಿಂಗ್ ಕಾರ್ಡ್‌ ತೋರಿಸಿ ಈ ವಿಳಾಸ ಎಲ್ಲಿ ಎಂದು ಮರು ಪ್ರಶ್ನಿಸಿದ್ದಾನೆ. ನಿರ್ಮಲಾ ಅವರು ವಿಸಿಟಿಂಗ್ ಕಾರ್ಡ್‌ ನೋಡುತ್ತಿದ್ದಂತೆ ಆ ಆಗಂತುಕ ಅವರ ಚಿನ್ನದ ಸರ ಮತ್ತು ಮಾಂಗಲ್ಯ ಸೂತ್ರವನ್ನು ಎಳೆದಿದ್ದಾನೆ. ಈ ವೇಳೆ ಚಿನ್ನದ ಸರ ಕಳ್ಳನ ಕೈಗೆ ಬಂದರೆ ಮಾಂಗಲ್ಯ ಸೂತ್ರ ಅರ್ಧ ಮಾತ್ರ ಸಿಕ್ಕಿದ್ದು, ಉಳಿದ ಭಾಗ ಕತ್ತಿನಲ್ಲೆ ಉಳಿದಿದೆ. ಈ ವೇಳೆ ನಿರ್ಮಲಾ ಅವರು ಬೊಬ್ಬೆ ಹಾಕಿದಾಗ ಮನೆಯವರು ಹೊರ ಬಂದಿದ್ದು ಸರ ಕಸಿದ ವ್ಯಕ್ತಿ ಸ್ಕೂಟರ್ ಏರಿ ಪರಾರಿಯಾಗಿದ್ದಾನೆ. ಆರೋಪಿಗಳ ಮುಖ ಚಹರೆಯನ್ನು ಗುರುತು ಹಚ್ಚಿದ್ದಾರೆ. ಕಳವಾದ ಚಿನ್ನದ ಮೌಲ್ಯ ಸುಮಾರು ಒಂದೂವರೆ ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.