

ಉಡುಪಿ : ತಂಡವೊಂದು ತಲವಾರು ಬೀಸಿ, ಬಿಯರ್ ಬಾಟಲಿ ಹಾಗೂ ಬ್ಯಾಟ್, ವಿಕೆಟ್ ನಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿ ನಡೆದಿದೆ.
ವಕ್ವಾಡಿಯ ಚಂದ್ರಶೇಖರ್(27) ಹಾಗೂ ಅಶೋಕ್ (45) ಗಂಭೀರ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಕ್ವಾಡಿಯ ಆದರ್ಶ, ಎಡ್ವರ್ಡ್, ಗಣೇಶ್ ಕುಂಭಾಶಿ, ಗೋವರ್ಧನ್, ಶಶಿಕಾಂತ, ಇಲಿಯಾಸ್, ಪುನೀತ್, ತರುಣ್, ಸುಶಾಂತ್, ಹರ್ಷ, ವಿಘ್ನೇಶ್ ಆರೋಪಿಗಳು. ಈ ಪೈಕಿ ಆದರ್ಶ ಸಹಿತ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು ಪರಾರಿಯಾದವರ ಪತ್ತೆಗೆ ಬಲೆಬೀಸಲಾಗಿದೆ.