ಮಂಗಳೂರು: ನಗರದ ಮೇರಿಹಿಲ್ ಐಟಿ ಕಂಪೆನಿಯೊಂದರ ಚಾಲಕ ಸಂದೀಪ್ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ತೇಜಸ್ ಶೆಟ್ಟಿ, ಭವಿತ್ ಶೆಟ್ಟಿ, ಪ್ರೀತಂ, ದೀಕ್ಷಿತ್ ದೇವಾಡಿಗ ಬಂಧಿತ ಆರೋಪಿಗಳಾಗಿದ್ದು, ಇನ್ನೂ ಇಬ್ಬರ ಬಂಧನವಾಗಲು ಬಾಕಿಯಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ತೇಜಸ್ ಶೆಟ್ಟಿ ಕೂಡಾ ಈ ಸಂಸ್ಥೆಯಲ್ಲಿ ಚಾಲಕನಾಗಿದ್ದು, ಈತನಿಗೂ ಕೊಲೆಯತ್ನಕ್ಕೊಳಗಾದ ಸಂದೀಪ್‌ಗೂ ವೈಷಮ್ಯವಿತ್ತು ಎನ್ನಲಾಗಿದೆ. ಬುಧವಾರ ರಾತ್ರಿ ತೇಜಸ್ ಶೆಟ್ಟಿ ತನ್ನ ಪಾಳಿ ಮುಗಿದ ಬಳಿಕ ಇತರರ ಜೊತೆಗೂಡಿ ಕೊಲೆ ಯತ್ನ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಸಂದೀಪ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.