March 21, 2026
WhatsApp Image 2024-08-18 at 11.04.34 AM

ಉಪ್ಪಿನಂಗಡಿ: ತೋಡಿನ ನೀರಿನಲ್ಲಿ ಮುಳುಗಿ ಬಾಲಕ ನೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಹಲೇಜಿ ಎಂಬಲ್ಲಿ ಶನಿವಾರ ಸಂಭವಿಸಿರುವುದು ವರದಿಯಾಗಿದೆ. ಮೃತ ಬಾಲಕನನ್ನು ತುರ್ಕಳಿಕೆ ಕರೆಂಕಿತೋಡಿ ನಿವಾಸಿ ಮುಹಮ್ಮದ್ ಮುಸ್ತಫ ಎಂಬವರ ಪುತ್ರ ಮುಹಮ್ಮದ್ ತಂಝೀರ್ (16) ಎಂದು ಗುರುತಿಸಲಾಗಿದೆ. ಮೃತ ಬಾಲಕ ಪುತ್ತಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದನು. ತನ್ನ ಶಾಲಾ ಶಿಕ್ಷಕರೊಬ್ಬರ ತಾಯಿಯ ಪುಣ್ಯ ತಿಥಿಯಲ್ಲಿ ಭಾಗವಹಿಸಲೆಂದು ಕರಾಯ ಗ್ರಾಮದ ಹಲೇಜಿಗೆ ಬಂದಿದ್ದ ಈತ ಮಧ್ಯಾಹ್ನದ ಊಟ ಸೇವಿಸಿ ಹಿಂದಿರುಗುವ ವೇಳೆ, ಸನಿಹದಲ್ಲೇ ಹರಿಯುವ ತೋಡಿನ ನೀರಿಗೆ ಸ್ನಾನ ಮಾಡಲೆಂದು ಇಳಿದಾತ ಕಣ್ಮರೆಯಾಗಿದ್ದ. ಜೊತೆಗಿದ್ದ ಸಹಪಾಠಿಗಳು ಹುಡುಕಾಟ ನಡೆಸಿ ವಿಫಲರಾದಾಗ, ಶಿಕ್ಷಕರ ಮನೆಗೆ ಮಾಹಿತಿ ನೀಡಿದ್ದು, ಶಿಕ್ಷಕರು ಮತ್ತವರ ಸಂಬಂಧಿಕರು ಘಟನಾ ಸ್ಥಳಕ್ಕೆ ಆಗಮಿಸಿ ನೀರಿನಿಂದ ಆತನನ್ನು ಹೊರ ತೆಗೆದರಾದರೂ, ಆ ವೇಳೆ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿ ಮೃತ ಬಾಲಕನ ತಂದೆ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.