ಬೆಂಗಳೂರು: ನಗರದ ಏರ್ಪೋರ್ಟ್ ರಸ್ತೆಯ ಬ್ಯಾಟರಾಯನಪುರ ಗ್ರಾಮದಲ್ಲಿ ವಾಸವಿದ್ದ ಮಂಗಳೂರು ಮೂಲದ ವೃದ್ಧ ದಂಪತಿ ಹತ್ಯೆಯಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಕರಣ ಬಯಲಿಗೆ ಬಂದಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.
ಸುಮಾರು 20 ವರ್ಷಗಳ ಹಿಂದೆ ವೃದ್ಧ ದಂಪತಿ ಸೈಟ್ ಖರೀದಿಸಿ ವಾಸವಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗ ತಿಂಡ್ಲು ಗ್ರಾಮದಲ್ಲಿ ವಾಸವಿದ್ದಾರೆ. ಕಿರಿಯ ಮಗ ತಂದೆ-ತಾಯಿ ಜತೆ ಇದ್ದನು. ಕೊಲೆ ನಡೆದ ಬಳಿಕ ಕಿರಿಯ ಮಗ ಮನೆಯಲ್ಲಿ ಕಾಣಿಸುತಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಆಂಬ್ಯಲೆನ್ಸ್ ವಾಹನ ತರಿಸಿ, ಮೃತ ದಂಪತಿ ದೇಹವನ್ನು ಶವಪರೀಕ್ಷೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.