
ಉಡುಪಿ: ನವೆಂಬರ್ 15, 2025 ರಂದು ಸಂಜೆ 6.30ಕ್ಕೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮನೋಳಿ ಗುಜ್ಜಿ ಬೆಟ್ಟುವಿನ ಮನೆೊಂದರಲ್ಲಿ ಅಂದರ್–ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಬಂದ ಗುಪ್ತ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಎಂ.ಡಿ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದರು.
ದಾಳಿ ಸಂದರ್ಭದಲ್ಲಿ ಜೂಜಾಟದಲ್ಲಿ ತೊಡಗಿದ್ದ ನವೀನ್ (37), ಭಾಸ್ಕರ್ (55), ಕೃಷ್ಣ (27), ಜಗದೀಶ್, ಸಂತೋಷ್ (42), ಶಂಕರ ಪೂಜಾರಿ (42), ಮಂಜುನಾಥ್ (37) ಹಾಗೂ ಶಿವಯ್ಯ (36)ರನ್ನು ಪೊಲೀಸರವರು ವಶಕ್ಕೆ ಪಡೆದಿದ್ದಾರೆ.
ಘಟನಾಸ್ಥಳದಿಂದ ₹1,02,060 ನಗದು, 52 ಇಸ್ಪೀಟ್ ಎಲೆಗಳು, 7 ಮೊಬೈಲ್ ಫೋನ್ಗಳು, ಕಂದು–ಕಪ್ಪು ಡಿಸೈನ್ ಬೆಡ್ಶೀಟ್, ಜೊತೆಗೆ 2 ಮೋಟಾರ್ ಸೈಕಲ್ಗಳು ಮತ್ತು 1 ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಕ್ರ. 79/2023, ಕಲಂ 80 KP Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
