ತೆಲಂಗಾಣ: ಉದ್ಯಮಿಯೊಬ್ಬ ಹೊಸ ಹೋಟೆಲ್ ಆರಂಭಿಸಿ ತನ್ನ ಹೋಟೆಲ್ ಬಗ್ಗೆ ಜನಕ್ಕೆ ತಿಳಿಯಲೆಂದು 1 ರೂಪಾಯಿ ನೋಟ್ಗೆ ಒಂದು ಬಿರಿಯಾನಿ ಕೊಡುವುದಾಗಿ ಪ್ರಚಾರ ನಡೆಸಿದ್ದ ಇದರಿಂದ ಜನರು ಬಿರಿಯಾನಿಗೆ ಮುಗಿಬಿದ್ದಿದ್ದು ಹೊಟೇಲ್ ಬಳಿ ಹೈಡ್ರಾಮವೇ ನಡೆದಿದೆಕರೀಂನಗರದ ಹೊಟೇಲ್ ವೊಂದರಲ್ಲಿ ಉದ್ಘಾಟನಾ ಕೊಡುಗೆಯಾಗಿ ಒಂದು ರೂಪಾಯಿಗೆ ಬಿರಿಯಾನಿ ಘೋಷಿಸಿದ್ದು ಜನರ ದಂಡೇ ಬಿರಿಯಾನಿ ಕೊಂಡೊಯ್ಯಲು ಹರಿದು ಬಂದಿತ್ತು. ಜನರು ವಾಹನಗಳಲ್ಲಿ ಬಂದ ಕಾರಣ ಸಂಚಾರ ದಟ್ಟನೆಯೂ ಉಂಟಾಗಿತ್ತು.
ಒಂದು ರೂಪಾಯಿಯ ಬಿರಿಯಾನಿ ಪ್ರಚಾರದ ಎಫೆಕ್ಟ್‌ನಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್ಗೆ ಆಗಮಿಸಲು ಪ್ರಾರಂಭಿಸಿದರು.
ಹೋಟೆಲ್ ಮಾಲೀಕರ ಈ ಪ್ರಚಾರದಿಂದ ಕೆಲವೇ ಗಂಟೆಗಳಲ್ಲಿ ಸುಮಾರು 800 ಪಾರ್ಸೆಲ್‌ಗಳನ್ನು ಮಾರಾಟ ಮಾಡಿದರು. ಮಾಡಿದ್ದ ಬಿರಿಯಾನಿ ಎಲ್ಲವೂ ಕೆಲವೇ ಗಂಟೆಗಳಲ್ಲಿ ಖಾಲಿಯಾಗಿದ್ದು, ಗ್ರಾಹಕರಿಗೆ ಬಿರಿಯಾನಿ ಇಲ್ಲ, ಖಾಲಿಯಾಗಿದೆ ಎಂದು ಅಂಗಡಿ ಕೆಲಸಗಾರರು ತಿಳಿಸಿದ್ದಾರೆ.
ಆದರೆ ಹೋಟೆಲ್ಗೆ ಬಂದವರು ಬಿರಿಯಾನಿ ಕೊಡಬೇಕು ಎಂದು ಜಗಳ ಆರಂಭಿಸಿದಾಗ ಹೊಟೇಲ್ ಆಡಳಿತ ಮಂಡಳಿ ಗಲಿಬಿಲಿಗೊಂಡಿದೆ. ಬಿರಿಯಾನಿ ವಿಚಾರವಾಗಿ ಗ್ರಾಹಕರು ಹೋಟೆಲ್ ಆಡಳಿತ ಮಂಡಳಿಯೊಂದಿಗೆ ಜಗಳವಾಡಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ಮಾರಾಮಾರಿ ನಡೆಯಿತು. ಸ್ಥಳದಲ್ಲಿ ನೂಕುನುಗ್ಗಲು ಸಂಭವಿಸುವ ಅಪಾಯವಿರುವುದು ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಟ್ರಾಫಿಕ್ ಹೆಚ್ಚಾದಾಗ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.ಬಳಿಕ ಪೊಲೀಸರು ಹೊಟೇಲ್ ಮ್ಯಾನೇಜರ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.ಇದಲ್ಲದೆ ನೋ ಪಾರ್ಕಿಂಗ್ ಮಾಡಿದ್ದಕ್ಕೆ ಪ್ರತಿಯೊಬ್ಬರಿಗೂ 100 ರೂಪಾಯಿ ದಂಡ ವಿಧಿಸಿದರು. 1 ರೂಪಾಯಿಗೆ ಬಿರಿಯಾನಿ ತೆಗೆದುಕೊಂಡು ಹೋಗಲು ಬಂದು 100 ದಂಡ ಕೊಟ್ಟು ಹೋಗಿದ್ದಾರೆ.