

ಉಡುಪಿ: ಉಡುಪಿ ಕೃಷ್ಣಮಠಕ್ಕೆ ಆಗಮಿಸಿದ್ದ ಮಹಿಳೆಯೋರ್ವರು ಮಲಗಿದ್ದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಶ್ರೀರಂಗಪಟ್ಟಣದ ನಿವಾಸಿ ವಸಂತಿ ಮೃತ ದುರ್ದೈವಿಯಾಗಿದ್ದಾರೆ.
ಕೃಷ್ಣಮಠಕ್ಕೆ ಬಂದಿದ್ದ ಇವರು ಯಾತ್ರಾರ್ಥಿಗಳು ಉಳಿದುಕೊಳ್ಳುವ ಹಾಲ್ ಒಂದರಲ್ಲಿ ಮಲಗಿದ್ದರು. ತಾಯಿ ಎಬ್ಬಿಸಿದಾಗ ಮಹಿಳೆ ಎಚ್ಚರವಾಗಲಿಲ್ಲ. ಆಯಾಸದಿಂದ ಎಚ್ಚೆತ್ತಿಲ್ಲ ಎಂದು ಭಾವಿಸಿ ಸುಮ್ಮನಾಗಿದ್ದರು.
ಆದರೆ ಮಹಿಳೆ ಎದ್ದೇಳದೆ ಇರುವುದನ್ನು ಕಂಡು ಗಾಬರಿಯಾಗಿ ತಕ್ಷಣ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.