April 23, 2025
WhatsApp Image 2023-12-16 at 5.54.00 PM

ಜೈಪುರ: ಚಲಿಸುತ್ತಿದ್ದ ಬಸ್​ನಲ್ಲಿ ದಲಿತ ಮಹಿಳೆಯ ಮೇಲೆ ಇಬ್ಬರು ಅತ್ಯಾಚಾರವೆಸಗಿದ ಘಟನೆ ಜೈಪುರದಲ್ಲಿ ಬೆಳಕಿಗೆ ಬಂದಿದೆ. 20 ಮಹಿಳೆ ಉತ್ತರ ಪ್ರದೇಶ ಕಾನ್ಪುರದಿಂದ ಜೈಪುರಕ್ಕೆ ಬರುವ ವೇಳೆ ಚಾಲಕರು ಅತ್ಯಾಚಾರವೆಸಗಿದ್ದಾರೆ. ಡಿಸೆಂಬರ್​ 9ರಂದು ಮಧ್ಯರಾತ್ರಿ ಖಾಸಗಿ ಬಸ್​ನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಹಿಳೆ ಕ್ಯಾಬಿನ್​ನಲ್ಲಿ ಕುಳಿತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬಿನ್​ನೊಳಗಿದ್ದ ಆರಿಫ್​ ಮತ್ತು ಲಲಿತ್​ ಎಂಬ ಚಾಲಕರು ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾರೆ. ಸದ್ಯ ಈ ಘಟನೆ ಸಂಬಂಧ ಆರಿಫ್​ನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಲಾಗಿದೆ. ಮತ್ತೋರ್ವ ಆರೋಪಿ ಲಲಿತ್​ ತಪ್ಪಿಸಿಕೊಂಡಿದ್ದು, ಆತನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ ಎಂದು ಕನೋಟಾ ಪೊಲೀಸ್​​ ಠಾಣೆಯ ಎಸ್​ಎಚ್​ಒ ಭಗವಾನ್​ ಸಹಾಯ್​ ಮೀನಾ ತಿಳಿಸಿದ್ದಾರೆ. ಇನ್ನು ಬಸ್​ನಲ್ಲಿ ಕೆಲವು ಪ್ರಯಾಣಿಕರಿದ್ದು. ಆದರೆ ಮಹಿಳೆವ ಕ್ಯಾಬಿನ್​​ನಲ್ಲಿ ಕುಳಿತ್ತಿದ್ದಳು. ಈ ವೇಳೆ ಒಳಗಿನಿಂದ ಕ್ಯಾಬಿನ್​ ಮುಚ್ಚಕಲಾಗಿದೆ. ಅತ್ಯಾಚಾರ ಸಂದರ್ಭದಲ್ಲಿ ಬಸ್​ನಲ್ಲಿ ಜೋರಾಗಿ ಹಾಡು ಇಡಲಾಗಿತ್ತು ಎಂದು ತಿಳಿದುಬಂದಿದೆ.

About The Author

Leave a Reply

Your email address will not be published. Required fields are marked *

<p>You cannot copy content of this page.</p>