December 26, 2024
WhatsApp Image 2022-12-16 at 6.51.21 PM

ಮಂಜೇಶ್ವರ : ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿರುವ ಏತಡ್ಕ ವಳಕುಂಜದಲ್ಲಿ ವಾಸವಾಗಿರುವ ಜನಾರ್ಧನ ಎಂಬವರ ಇಬ್ಬರು ಮಕ್ಕಳು ನೂರಾರು ಕನಸುಗಳನ್ನು ಹೊತ್ತುಕೊಂಡು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ವಯಸ್ಸಿನಲ್ಲೇ ತನ್ನ ಎರಡೂ ಕಿಡ್ನಿ ವೈಫಲ್ಯಕ್ಕೊಳಗಾಗಿ ಖರ್ಚು ವೆಚ್ಚಕ್ಕೆ ಯಾವುದೇ ದಾರಿ ಇಲ್ಲದೆ ಚಿಕಿತ್ಸೆಗೆ ಹಾಗೂ ಸಂಬಂಧಿತ ಖರ್ಚು ವೆಚ್ಚಕ್ಕೆ ಉದಾರ ದಾನಿಗಳಿಂದ ಕುಟುಂಬ ನೆರವು ಯಾಚಿಸಿದೆ.ಕಳೆದ ಹಲವಾರು ವರ್ಷಗಳಿಂದ ಬೀಡಿ ಕಾರ್ಮಿಕನಾಗಿ ದುಡಿಯುತ್ತಿರುವ ಜನಾರ್ಧನವರು ಬೆವರು ಸುರಿಸಿ ಸಂಪಾದಿಸಿದ ಹಣದಿಂದ ತನ್ನ ಮಕ್ಕಳ ಉತ್ತಮವಾದ ಭವಿಷ್ಯವನ್ನು ನೋಡಬೇಕೆಂಬ ಕನಸನ್ನು ಹೊತ್ತುಕೊಂಡು ಜೀವನದ ಮೆಟ್ಟಲನ್ನು ಹತ್ತುತ್ತಿರುವ ಮಧ್ಯೆ ವಿಧಿಯ ಲೀಲೆ ಬೇರೆಯೇ ಆಗಿತ್ತು. ಇವರ ನಾಲ್ಕು ಮಕ್ಕಳ ಪೈಕಿ ಇಬ್ಬರು ಮಕ್ಕಳು ಕಿಡ್ನಿವೈಫಲ್ಯಕ್ಕೊಳಗಾಗಿ ಸುಂಟರಗಾಳಿಯಂತೆ ದೊಡ್ಡದಾದ ಆಘಾತವೊಂದನ್ನು ಎದುರಿಸುವ ಪರೀಕ್ಷಣೆಯನ್ನು ದೇವರು ಈ ಕುಟುಂಬದ ಮುಂದೆ ಇಟ್ಟಿದ್ದಾನೆ.ಇವರ ನಾಲ್ಕನೇ ಪುತ್ರನಾಗಿರುವ 20 ವರ್ಷ ಪ್ರಾಯದ ಮಂಜುನಾಥ ಕಳೆದ ಐದು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಈತ ಐಟಿಐ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿ ಭವಿಷ್ಯವನ್ನು ರೂಪಿಸಿಕೊಳ್ಳಲು ತಯಾರಿ ನಡೆಸುತ್ತಿರುವ ಮಧ್ಯೆ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಈತನ ಜೀವನದ ಕನಸುಗಳು ನುಚ್ಚು ನೂರಾಗಿದೆ. ಇದರಿಂದ ಮನನೊಂದು ಆರ್ಥಿಕವಾಗಿ ಬಹಳ ಹಿಂದುಳಿದ ಈ ಕುಟುಂಬ ಮಗನ ಚಿಕಿತ್ಸೆಯ ಖರ್ಚಿಗಾಗಿ ಪರದಾಡುತ್ತಿರುವ ಮಧ್ಯೆ ಒಂದು ವರ್ಷದ ಅಂತರದಲ್ಲೇ ಜನಾರ್ಧನರವರಿಗೆ ಮತ್ತೊಂದು ಹೊಡೆತ ಬಿದ್ದಿದೆ. ಇವರ ಪುತ್ರಿ 28 ವರ್ಷ ಪ್ರಾಯದ ಶ್ರೀಜಾ ಎಂಬಾಕೆ ಕೂಡಾ ಕಿಡ್ನಿ ವೈಫಲ್ಯಕ್ಕೊಳಗಾಗಿದ್ದಾಳೆ.

ಈಕೆ ಕೂಡಾ ಕಳೆದ 4 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾಳೆ. ಈಕೆಗೆ ಹತ್ತು ವರ್ಷ ಪ್ರಾಯದ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಧಿಯಾಮ್ಸ್ ಹಾಗೂ ನಾಲ್ಕು ವರ್ಷ ಪ್ರಾಯದ ಎಲ್ ಕೆ ಜಿ ತರಗತಿಯಲ್ಲಿ ಕಲಿಯುತ್ತಿರುವ ಹಿಮಾನ್ಸಿ ಎಂಬ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ರೋಗದ ಯಾತನೆಯ ಜೊತೆಯಾಗಿ ಮಕ್ಕಳ ಮುಂದಿನ ಭವಿಷ್ಯವನ್ನು ಯೋಚಿಸಿಕೊಂಡು ಈಕೆಗೆ ದಿನದಿಂದ ದಿನಕ್ಕೆ ರೋಗದ ತೀವೃತೆ ಹೆಚ್ಚಳವಾಗುತ್ತಿದೆ. ಈ ಮುದ್ದಾದ ಮಕ್ಕಳ ಮುಖವನ್ನು ನೋಡಿದರೆ ಒಮ್ಮೆಗೆ ಎಂತಹ ಕಲ್ಲು ಮನಸ್ಸಾದರೂ ಕರಗಿ ನೀರಾಗಬಹುದಾಗಿದೆ. ಈ ಇಬ್ಬರು ರೋಗಿಗಳಿಗೂ ವೈದ್ಯರು ಶಸ್ತ್ರಕ್ರಿಯೆ ಮೂಲಕ ಕಿಡ್ನಿ ಬದಲಾಯಿಸುವಂತೆ ಸೂಚಿಸಿದ್ದಾರೆ.ಇದಕ್ಕೆ ಸುಮಾರು ೮೦ ಲಕ್ಷ ರೂ. ವೆಚ್ಚ ತಗಲಬಹುದಾಗಿ ಅಂದಾಜಿಸಲಾಗಿದೆ. ಇಬ್ಬರಿಗೂ ಇದೀಗ ವಾರದಲ್ಲಿ ಎರಡು ಸಲ ಡಯಾಲಿಸಿಸ್ ನಡೆಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಈ ಕುಟುಂಬಕ್ಕೆ ಇಷ್ಟೊಂದು ಮೊತ್ತದ ಹಣವನ್ನು ಸಂಗ್ರಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಊರ ಹಿರಿಯ ಗಣ್ಯರು, ಸಾಮಾಜಿಕ ಕಾರ್ಯಕರ್ತರುಗಳು, ಧಾರ್ಮಿಕ ಮುಖಂಡರುಗಳು ಹಾಗೂ ಜನಪ್ರತಿನಿಧಿಗಳು ಈ ಕುಟುಂಬದೊಂದಿಗೆ ಕೈ ಜೋಡಿಸಿ ಮಂಜು- ಶ್ರೀಜ ಎಂಬ ಹೆಸರಲ್ಲಿ ಕೇರಳ ಗ್ರಾಮೀಣ ಬ್ಯಾಂಕ್ ಬದಿಯಡ್ಕ ಶಾಖೆಯಲ್ಲಿ ಸಂಯುಕ್ತ ಖಾತೆಯನ್ನು ತೆರೆದು ಉದಾರ ದಾನಿಗಳಿಂದ ಸಯಾಹ ಹಸ್ತಕ್ಕಾಗಿ ಮನವಿ ಕೊಂಡಿದ್ದಾರೆ.ದೇವರು ನಮಗೆ ಅನುಗ್ರಹಿಸಿದ ನಮ್ಮ ಆರೋಗ್ಯ ಹಾಗು ಸಂಪತ್ತನಿಂದ ಒಂದು ಹೊತ್ತಿನ ಆಹಾರದ ಖರ್ಚಿನ ಹಣವನ್ನಾದರೂ ಈ ಬಡ ಕುಟುಂಬದ ಕಣ್ಣೀರನ್ನು ಒರೆಸಲು ನಾವು ನೆರವಾಗಬೇಕಾಗಿದೆ. ದೇವರು ನಮಗೆ ನೀಡಿದ ಅನುಗ್ರಹ ಅಪಾರವಾಗಿದೆ. ದೇವರು ನಾವು ನೀಡುತ್ತಿರುವ ದಾನದಿಂದ ನಮ್ಮೆಲ್ಲರನ್ನೂ ಎಲ್ಲಾ ರೋಗದಿಂದಲೂ ವಿಪತ್ತಿನಿಂದಲೂ ರಕ್ಷಿಸಲಿ. ಸಹೋದರ ಸಹೋದರಿಯರೇ ದಾನವು ಎಲ್ಲಾ ವಿಪತ್ತಿನಿಂದಲೂ ರಕ್ಷಿಸುತ್ತದೆ ಎಂಬ ಮಾತನ್ನು ಮತ್ತೊಮ್ಮೆ ನೆನಪಿಸಬೇಕಾಗಿದೆ.ಸಹಾಯ ಹಸ್ತ ನೀಡಲು ಇಚ್ಚಿಸುವವರಿಗೆ ಬ್ಯಾಂಕ್ ಖಾತೆ ಹಾಗೂ ಗೂಗಲ್ ಪೇ ಸಂಖ್ಯೆಯನ್ನು ಈ ಕೆಳಗೆ ನಮೂದಿಸಲಾಗಿದೆ.

Bank A/C No.40617101111871 Google Pay No. 8891243838

About The Author

Leave a Reply

Your email address will not be published. Required fields are marked *

You cannot copy content of this page.