
ಮಂಗಳೂರು: ಖರೀದಿ ಮಾಡಿದ ಕೆಲವೇ ಕ್ಷಣಗಳಲ್ಲಿ ಮಾರುತಿ ರಿಟ್ಸ್ ಕಾರೊಂದು ರಸ್ತೆಯಲ್ಲಿ ಸಂಚಾರದಲ್ಲಿದ್ದಾಗಲೇ ಧಗಧಗನೇ ಹೊತ್ತಿ ಉರಿದು ಭಸ್ಮವಾದ ಘಟನೆ ಶುಕ್ರವಾರ ಸಂಜೆ ನಗರದ ಕದ್ರಿ ಪೋಲಿಸ್ ಠಾಣೆಯ ಮುಂಭಾಗ ನಡೆದಿದೆ. 2014ರ ಮಾಡೆಲ್ನ ಡೆಲ್ಲಿ ರಿಜಿಸ್ಟ್ರಾರ್ನ ಈ ಸೆಕೆಂಡ್ಹ್ಯಾಂಡ್ ಕಾರನ್ನು ಮಂಗಳೂರು ಹೊರವಲಯದ ಕೊಂಡಾಣ ನಿವಾಸಿ ಇಂದೇ 2.50ಲಕ್ಷ ರೂಪಾಯಿಗೆ ಖರೀದಿಸಿದ್ದರು. ಬಳಿಕ ಕಾರನ್ನು ಮನೆಗೆ ಕೊಂಡೊಯ್ಯುತ್ತಿದ್ದರು. ಕಾರು ಕದ್ರಿ ಪೋಲಿಸ್ ಠಾಣೆಯ ಮುಂಭಾಗ ಬರುತ್ತಿದ್ದಂತೆ ತಾಂತ್ರಿಕ ದೋಷಕ್ಕೊಳಪಟ್ಟು ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸವಾರ ಇಳಿದ ಕಾರಣ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಕದ್ರಿ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ದೌಢಾಯಿಯಿಸಿ ಬೆಂಕಿ ನಂದಿಸಿದ್ದರೂ ಅಷ್ಟರಲ್ಲಾಗಲೇ ಕಾರು ಸುಟ್ಟುರಿದು ಭಸ್ಮವಾಗಿದೆ.
