

ನವದೆಹಲಿ: ಪಾರ್ಟಿ ಸಮಯದಲ್ಲಿ ನನ್ನ ಗಂಡ ತನ್ನ ಸ್ನೇಹಿತನೊಂದಿಗೆ ದೈಹಿಕ ಸಂಬಂಧವನ್ನು ಸ್ಥಾಪಿಸುವಂತೆ ಕೇಳಿಕೊಂಡಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ, ಆತನ ಸ್ನೇಹಿತ ಮತ್ತು ಸೇರಿದಂತೆ ಒಂಬತ್ತು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ಮಹಿಳೆ ಮುರಾದಾಬಾದ್ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದಳು. ನೋಯ್ಡಾದ ಸೆಕ್ಟರ್ 137ರಲ್ಲಿ ಅತ್ತೆ-ಮಾವಂದಿರೊಂದಿಗೆ ವಾಸಿಸುತ್ತಿದ್ದರು. ಜೂನ್ 23ರಂದು ದೂರು ದಾಖಲಿಸಲು ಅವಳು ಪೊಲೀಸರನ್ನು ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಮದುವೆಯಾದಾಗಿನಿಂದಲೂ, ತನ್ನ ಅತ್ತೆ ಮಾವಂದಿರು ಹೆಚ್ಚು ಆಧುನಿಕ ಜೀವನಶೈಲಿಗೆ ಹೊಂದಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅವಳ ಅತ್ತೆ ತನ್ನ ಗಂಡನೊಂದಿಗೆ ದೈಹಿಕ ಸಂಬಂಧ ಹೊಂದಬೇಕಾದ ದಿನಗಳನ್ನು ಸಹ ನಿರ್ಧರಿಸುತ್ತಿದ್ದಳು ಅಂತ ನೊಂದ ಮಹಿಳೇ ಹೇಳಿದ್ದಾರೆ.