March 14, 2026
WhatsApp Image 2023-01-16 at 10.23.54 AM

ಬೆಂಗಳೂರು : ಆರ್‌.ಟಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಟದಹಳ್ಳಿಯಲ್ಲಿ ಅಕ್ರಮ ಸಂಬಂಧ ಒಪ್ಪದಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಗೆ ಚಾಕು ಇರಿತ ಘಟನೆ ಬೆಳಕಿಗೆ ನಡೆದಿದೆ.

ಶೇಖ್‌ ಮೆಹಬೂದ್‌ ಎಂಬಾತನಿಂದ ಹಬೀಬಾತಾಜ್‌ ಎಂಬ ಮಹಿಳೆಗೆ (30)ಗೆ ಚಾಕು ಇರಿತ ಮಾಡಿದ್ದಾನೆ. ಆರು ವರ್ಷದ ಹಿಂದೆ ಹಬೀಬಾತಾಜ್‌ ಪತಿ ಮೃತಪಟ್ಟಿದ್ದರು. ಹಬೀಬಾತಾಜ್‌ ಇಬ್ಬರು ಮಕ್ಕಳ ಜೊತೆ ಜೀವನ ನಡೆಸುತ್ತಿದ್ದರು. ಹಬೀಬಾ ತಾಜ್‌, ಆಟೋ ಚಾಲಕ ಶೇಖ್‌ ಮೆಹಬೂದ್‌ ಸ್ನೇಹ ಬೆಳೆಸಿದ್ದರು.

ಆಟೋ ಚಾಲಕ ಶೇಖ್‌ ಮೆಹಬೂದ್‌ ಮದುವೆಯಾಗಿ ಮಕ್ಕಳಿದ್ದರು. ಹೀಗಾಗಿ ಆಟೋ ಚಾಲಕ ಶೇಖ್‌ ಮೆಹಬೂದ್‌ನಿಂದ ದೂರವಾಗಲು ಹಬೀಬಾ ನಿರ್ಧರಿಸಿದ್ದರು. ಈ ವಿಚಾರ ಮನಗಂಡು ನಿನ್ನೆ ರಾತ್ರಿ ಶೇಖ್‌ ಮೆಹಬೂದ್‌ , ಹಬೀಬಾ ನಡುವೆ ಗಲಾಟೆ ನಡೆಯಿತು. ಗಲಾಟೆ ವೇಲೆ ಹಬೀಬಾ ತಾಜ್‌ ಗೆ ಚಾಕು ಇರಿದ್ದಾನೆ ಎಂದು ತಿಳಿದು ಬಂದಿದೆ. ಗಾಯಾಳು ಹಬೀಬಾ ತಾಹ್‌ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಶೇಖ್‌ ಮೆಹಬೂದ್‌ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಂಬಂಧ ಆರ್‌.ಟಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.