March 20, 2026
WhatsApp Image 2025-12-15 at 1.55.41 PM

ಉಡುಪಿ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆ ಐದು ಸೆಂಟ್ಸ್ ಕಾಲನಿ ಬಳಿ ಯುವಕನನ್ನು ಆತನ ಪರಿಚಿತ ಸ್ನೇಹಿತರೇ ಹೊಡೆದು ಕೊಲೆಗೈದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಕೊಲೆಯಾದವನನ್ನು ಪಡುಕರೆ ಸಂತೋಷ್ ಮೊಗವೀರ(30) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಯುವಕರು ಮದ್ಯದ ಪಾರ್ಟಿ ಮಾಡಿದ್ದು ಬಳಿಕ ಕ್ಷುಲ್ಲಕ ವಿಚಾರಕ್ಕೆ ಹೊಡೆದಾಟ ನಡೆದಿದ್ದು ಮಾರಣಾಂತಿಕ ಹಲ್ಲೆಯಿಂದ ಸಂತೋಷ ಮೊಗವೀರ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರ ಸಹಕಾರದಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬ್ರಹ್ಮಾವರ ಹಾಗೂ ಕೋಟ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.