

ಲಖನೌ: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದು ಹುಡುಗಿಯರು ಶೌಚಾಲಯದಲ್ಲಿರುವಾಗ ವೀಡಿಯೋ ಶೂಟಿಂಗ್ ಪ್ರಕರಣ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವಾಗಲೇ ಇದೇ ಮಾದರಿಯ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.ಉತ್ತರ ಪ್ರದೇಶ ಗಾಜೀಪುರದಲ್ಲಿ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.ಗಾಜೀಪುರ ಸರ್ಕಾರಿ ಹೋಮಿಯೋಪಥಿ ಕಾಲೇಜಿನ ವಿದ್ಯಾರ್ಥಿನಿ ಮಂತಾಶಾ ಕಝ್ಮಿ ಎಂಬಾಕೆ ಹಾಸ್ಟೆಲ್‌ನಲ್ಲಿ ತನ್ನ ಸಹಪಾಠಿಗಳ ಖಾಸಗಿ ಫೋಟೊ,ವೀಡಿಯೋ ಸೆರೆಹಿಡಿದು ಸೀನಿಯರ್ ಅಮೀರ್ ಎಂಬಾತನಿಗೆ ಕಳುಹಿಸಿಕೊಡುತ್ತಿದ್ದಳು. ಅಮೀರ್ ಈ ಫೋಟೊ ಮತ್ತು ವೀಡಿಯೋ ಬಳಸಿ ಸಂತ್ರಸ್ತೆಯರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ.ಈ ಬೆಳವಣಿಗೆ ಹಿಂದೆ ಕಝ್ಮಿ ಕೈವಾಡದ ಶಂಕೆ ಹಿನ್ನೆಲೆಯಲ್ಲಿ ರೂಂಮೇಟ್ ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಕಝ್ಮಿಯ ಮೊಬೈಲ್ ತಪಾಸಣೆ ಮಾಡಿದ ವೇಳೆ ಆಕೆ ಫೋಟೊ ಮತ್ತು ವೀಡಿಯೋ ಸೆರೆಹಿಡಿದು ಅದನ್ನು ಅಮೀರ್‌ಗೆ ರವಾನಿಸಿದ್ದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು 6 ತಿಂಗಳ ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಅದರ ಬೆನ್ನಲ್ಲೇ ಸಂತ್ರಸ್ತ ವಿದ್ಯಾರ್ಥಿನಿಯರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ದೂರು ಆಧರಿಸಿ ಅಮೀರ್ ಮತ್ತು ಕಝ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ.