ಮಂಗಳೂರು : ಮಂಗಳೂರು ನಗರದ ಕದ್ರಿ ಸರ್ಕಿಟ್ ಹೌಸ್ ಬಿಜೈ ರಸ್ತೆ ಮಧ್ಯೆ ಬಟ್ಟಗುಡ್ಡೆ ಬಳಿ ಕಾರು ಅಪಘಾತ ಸಂಭವಿಸಿದ್ದು ಮೂವರು ಅಲ್ಪಸ್ವಲ್ಪಗಾಯಗಳೊಂದಿಗೆ ಪವಾಡ ಸದೃಶ್ಯರಾಗಿ ಪಾರಾಗಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಸುಮಾರು 12.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಸರ್ಕಿಟ್ ಹೌಸ್ ಕಡೆಯಿಂದ ಬಿಜೈ ಕಡೆಗೆ ವೇಗವಾಗಿ ಸಾಗುತ್ತಿದ್ದ ಮಾರುತಿ ಬಲೇನೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ವಿದ್ಯುತ್ ಕಂಬಕ್ಕೆ ಹೊಡೆದು ಪಕ್ಕದ ರಸ್ತೆ ಬಿದ್ದು ಅಲ್ಲಿದ್ದ ಪ್ರಪಾತದ ಸನಿಹದಲ್ಲೇ ಗಿಡ ಗಂಟಿಗಳ ಮಧ್ಯೆ ಸಿಲುಕಿಕೊಂಡಿದೆ.
ಕಾರು ಹೊಡೆದ ರಭಸಕ್ಕೆ ದಾರಿ ದೀಪದ ಲೈಟ್ ಕಂಬ ಕಿತ್ತು ಅನಾತಿ ದೂರಕ್ಕೆ ಬಿದ್ದಿದೆ.
ಕಾರಿನಲ್ಲಿದ್ದ ಮೂವರಿಗೆ ಅಲ್ಪ ಸ್ವಲ್ಪ ಗಾಯಾಗಳಾಗಿದೆ. ಸ್ವಲ್ಪ ತಪ್ಪಿದ್ದರೂ ಪ್ರಪಾತಕ್ಕೆ ಬೀಳುವ ಸಾಧ್ಯತೆಗಳಿತ್ತು .
ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.