December 6, 2025
WhatsApp Image 2023-02-15 at 12.15.07 PM

ಉಡುಪಿ: ಭಾಷೆ ಹಾಗೂ ಸಂಸ್ಕೃತಿ ವಿಚಾರದಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ಕುಂದಾಪುರ ಭಾಗದ ಜನರು ಆಡುವ ಕುಂದಾಪ್ರ ಕನ್ನಡಕ್ಕಾಗಿ ಪ್ರತ್ಯೇಕವಾದ ಕುಂದಾಪುರ ಕನ್ನಡ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವಂತೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಬಜೆಟ್ ಅಧಿವೇಶನದಲ್ಲಿ ಇಂದು ಸರಕಾರವನ್ನು ಒತ್ತಾಯಿಸಿದರು.

ಮಂಗಳವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಭಂಡಾರಿ, ಕುಂದಾಪುರ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸುವ ಕುರಿತು ಸರಕಾರದ ಗಮನ ಸೆಳೆದರು. ಕುಂದಾಪುರ ಕರ್ನಾಟಕಕ್ಕೆ, ದೇಶಕ್ಕೆ ವಿವಿಧ ವಿಷಯಗಳಲ್ಲಿ ಅದ್ಭುತವಾದ ಕೊಡುಗೆ ನೀಡಿದ ಊರು. ಕುಂದಾಪ್ರ ಭಾಷೆ, ಸಂಸ್ಕೃತಿಯ ವಿಚಾರದಲ್ಲಂತೂ ಇದು ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ. ಬೈಂದೂರಿನಿಂದ ಬ್ರಹ್ಮಾವರದ ತನಕ, ಇತ್ತ ಬಾರ್ಕೂರಿನಿಂದ ಹೆಬ್ರಿ ತನಕ ಮಲೆನಾಡು ಹಾಗೂ ಕರಾವಳಿಯ 300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಂದಕನ್ನಡ ಭಾಷೆಯಲ್ಲೇ ಸ್ಪಷ್ಟವಾಗಿ ಮಾತನಾಡುವ 25 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ ಎಂದವರು ವಿವರಿಸಿದ್ದಾರೆ. ಈ ಜನರ ಆಟ ಪಾಠಗಳಲ್ಲಿ, ಕೃಷಿ, ಮೀನುಗಾರಿಕಾ ಚಟುವಟಿಕೆಗಳಲ್ಲಿ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಕಂಬಳ, ಕೋಲ, ಹೋಳಿ ಆಚರಣೆಗಳಲ್ಲಿ ಕುಂದಾಪ್ರ ಕನ್ನಡ ಭಾಷೆಯ ಸೊಬಗು ಕಾಣಸಿಗುತ್ತದೆ. ತಾಲೂಕು ಬದಲಾದಾಗ ಕುಲಕಸಬುಗಳಿಗೆ ಅನುಗುಣವಾಗಿ ಕೆಲವು ಶಬ್ದಗಳು ಬದಲಾದರೂ ಕುಂದ ಕನ್ನಡ ಸಮೃದ್ಧಿ ಕಾಣುತ್ತದೆ ಎಂದರು.

About The Author

Leave a Reply

Your email address will not be published. Required fields are marked *

You cannot copy content of this page.