March 16, 2026
WhatsApp Image 2024-01-15 at 5.39.52 PM

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಜನವರಿ 17 ಮತ್ತು 18 ರಂದು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕೆಲವು ರಸ್ತೆಗಳ ಬದಲಿ ಮಾರ್ಗ ಹಾಗೂ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ಜ.17 ರಂದು ಸಾಯಂಕಾಲ 4 ಗಂಟೆಯಿಂದ ಮಂಗಳೂರಿನಿಂದ ಉಡುಪಿ ಮತ್ತು ಮಣಿಪಾಲ ಕಡೆಗೆ ಹೋಗುವ ಎಲ್ಲಾ ಖಾಸಗಿ ಬಸ್ಸುಗಳು ಸ್ವಾಗತಗೋಪುರ ರಸ್ತೆಯಲ್ಲಿ ಸಂಚಾರ ಮಾಡದೇ ರಾ.ಹೆ- 66 ಮೂಲಕ ಕರಾವಳಿ ಜಂಕ್ಷನ್​- ಬನ್ನಂಜೆ- ಶಿರಿಬೀಡು- ಸಿಟಿ ಬಸ್ಸು ನಿಲ್ದಾಣ ತಲುಪಬೇಕು. ನಂತರ ವಾಪಾಸು ಸರ್ವಿಸ್​ ಬಸ್ಸು ನಿಲ್ದಾಣ,- ಕಿದಿಯೂರು ಹೊಟೇಲ್​ ಮೂಲಕ ಕೆಳಗೆ ಇಳಿದು ಶಿರಿಬೀಡು -ಬನ್ನಂಜೆ – ಕರಾವಳಿ ಜಂಕ್ಷನ್​-ರಾ.ಹೆ 66 ಮೂಲಕ ಮಂಗಳೂರಿಗೆ ಸಂಚರಿಸಬೇಕು. ಕುಂದಾಪುರ ಕಡೆಯಿಂದ ಉಡುಪಿಗೆ ಬರುವ ಖಾಸಗಿ ಬಸ್ಸುಗಳು ಸಂತೆಕಟ್ಟೆ-&ಅಂಬಾಗಿಲು- ನಿಟ್ಟೂರು, -ಕರಾವಳಿ ಜಂಕ್ಷನ್​-, ಬನ್ನಂಜೆ-, ಶಿರಿಬೀಡು-, ಸಿಟಿ ಬಸ್ಸು ನಿಲ್ದಾಣ, -ಸರ್ವಿಸ್​ ಬಸ್ಸು ನಿಲ್ದಾಣ ತಲುಪಬೇಕು. ನಂತರ ಕಿದಿಯೂರು ಹೋಟೆಲ್​ ಮೂಲಕ ಕೆಳಗೆ ಇಳಿದು ಶಿರಿಬೀಡು- ಬನ್ನಂಜೆ ಕರಾವಳಿ ಜಂಕ್ಷನ್​ ರಾ.ಹೆ. 66 ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು. ಕಾರ್ಕಳ, ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಬಸ್ಸುಗಳು ಇಂದ್ರಾಳಿ- ಎಂ.ಜಿ.ಎಂ-. ಕಡಿಯಾಳಿ-, ಕಲ್ಸಂಕ- ಉಡುಪಿ ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ಅಲ್ಲಿಂದ ತಿರುಗಿಸಿ ವಾಪಸು ಕಲ್ಸಂಕ ಎಂ.ಜಿ.ಎಂ, ಇಂದ್ರಾಳಿ ಮೂಲಕ ಮಣಿಪಾಲ, ಕಾರ್ಕಳ ಕಡೆಗೆ ಸಂಚಾರ ಮಾಡಬೇಕು. ರಾಂಪುರ, ಕುಕ್ಕಿಕಟ್ಟೆ, ಮೂಡುಬೆಳ್ಳೆ ಕಡೆಯಿಂದ ಉಡುಪಿಗೆ ಬರುವ ಬಸ್ಸುಗಳು ಮಿಶನ್​ ಕಂಪೌಂಡ್​ನಿಂದ ಬಲಕ್ಕೆ ತಿರುಗಿ ಅಮ್ಮಣ್ಣಿ ರಾಮಣ್ಣ- ಚಿಟ್ಪಾಡಿ ಜಂಕ್ಷನ್​ನಿಂದ ಎಡಕ್ಕೆ ತಿರುಗಿ- ಬೀಡಿನಗುಡ್ಡೆ ಜಂಕ್ಷನ್​- ಶಾರದ ಕಲ್ಯಾಣ ಮಂಟಪ ಜಂಕ್ಷನ್​ ಎಡಕ್ಕೆ ತಿರುಗಿ- ಕಲ್ಸಂಕ- ಸಿ.ಟಿ ಬಸ್ಸು ನಿಲ್ದಾಣಕ್ಕೆ ಬಂದು ನಂತರ ಅದೇ ರಸ್ತೆ ಮಾರ್ಗವಾಗಿ ವಾಪಸು ಸಂಚರಿಸಬೇಕು. ಮಲ್ಪೆ ಕಡೆಯಿಂದ ಉಡುಪಿಗೆ ಬರುವಂತಹ ಖಾಸಗಿ ಬಸ್ಸುಗಳು ಆದಿಉಡುಪಿ-, ಕರಾವಳಿ ಜಂಕ್ಷನ್​ -ಬನ್ನಂಜೆ-, ಶಿರಿಬೀಡು, -ಸಿಟಿ ಬಸ್ಸು ನಿಲ್ದಾಣಕ್ಕೆ ಬಂದು ವಾಪಸು ಶಿರಿಬೀಡು, -ಬನ್ನಂಜೆ ಕರಾವಳಿ ಜಂಕ್ಷನ್​, ಆದಿಉಡುಪಿ ಮಾರ್ಗವಾಗಿ ಮಲ್ಪೆ ಕಡೆಗೆ ವಾಪಾಸು ಸಂಚರಿಸಬೇಕು. ರಾತ್ರಿ ಬಸ್​ನವರು ಉಡುಪಿ ಸಿಟಿ ಒಳಗೆ ಪ್ರವೇಶ ಮಾಡದೇ ಕರಾವಳಿ ಜಂಕ್ಷನ್​ನಲ್ಲಿ ಪ್ರಯಾಣಿಕರನ್ನು ಹತ್ತಿಸಿ, ಇಳಿಸಬೇಕು.

ಜ.17 ರಂದು ಸಾಯಂಕಾಲ 6 ಗಂಟೆಯಿಂದ ಜ.18 ರ ಬೆಳಗ್ಗೆ 6 ಗಂಟೆಯ ವರೆಗೆ ಸ್ವಾಗತ ಗೋಪುರ, ಕಿನ್ನಿಮೂಲ್ಕಿ, ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ, ಟಿ.ಎಂ.ಎ.ಪೈ ಆಸ್ಪತ್ರೆ, ಲಯನ್ಸ್​ ಸರ್ಕಲ್​, ಹಳೇ ಡಯಾನ ಸರ್ಕಲ್​, ಮಿತ್ರ ಜಂಕ್ಷನ್​, ತೆಂಕಪೇಟೆ, ರಥಬೀದಿ ರಸ್ತೆಯಲ್ಲಿ ಅಕ್ಕಪಕ್ಕ ವಾಹನ ಸಂಚಾರ ಮತ್ತು ಪಾರ್ಕಿಂಗ್​ ನಿಷೇಧಿಸಲಾಗಿದೆ. ಕಲ್ಸಂಕ ಜಂಕ್ಷನ್​ನಿಂದ ವಿದ್ಯೋದ್ಯಯ ಶಾಲೆಯವರೆಗೆ ರಸ್ತೆಯ ಬದಿಯ ಪಾರ್ಕಿಂಗ್​ ನಿಷೇಧಿಸಲಾಗಿದೆ. ನಾಗಬನಕ್ರಾಸ್​ ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕುಂಜೂರು ಎಲೆಕ್ಟ್ರೀಕಲ್ಸ್​ ನಿಂದ ಗೀತಾಂಜಲಿ ರಸ್ತೆಯವರೆಗೆ, ಸರ್ವಿಸ್​ ಬಸ್ಸು ನಿಲ್ದಾಣದ ಪೊಲೀಸ್​ ಔಟ್​ ಪೋಸ್ಟ್​ನಿಂದ ಕವಿ ಮುದ್ದಣ್ಣ ರಸ್ತೆಯವರೆಗೆ, ವಿಷ್ಣು ಫ್ಲವರ್​ ಸ್ಟಾಲ್​ನಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಭಾಸ್ಕರ ವಿಹಾರ್​ ರಸ್ತೆಯಿಂದ ಜಾಮೀಯ ಮಸೀದಿ ರಸ್ತೆಯವರೆಗೆ, ಕಲ್ಸಂಕದಿಂದ ಬಡಗುಪೇಟೆ ರಸ್ತೆಯವರೆಗೆ, ಸೌತ್​ ಶಾಲೆಯ ಬಳಿ ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ರಸ್ತೆಯವರೆಗೆ, ಜೋಡುಕಟ್ಟೆಯಿಂದ ಬ್ರಹ್ಮಗಿರಿಗೆ ಹೋಗುವ ರಸ್ತೆಯ ಬೇತಲ್​ ಚರ್ಚ್​ ಬಳಿ, ಎಲ್​.ಐ.ಸಿ ರಸ್ತೆಯ ಸಿಂಡಿಕೇಟ್​ ಟವರ್​ ಬಳಿ, ಅಲಂಕಾರ್​ ಟಾಕೀಸ್​ ರಸ್ತೆಯ ಬಳಿ, ಮಿಷನ್​ ಆಸ್ಪತ್ರೆಯಿಂದ ಲಯನ್ಸ್​ ಸರ್ಕಲ್​ ಬರುವ ರಸ್ತೆಯಲ್ಲಿ ಮಿಷನ್​ ಆಸ್ಪತ್ರೆ ಎದುರು, ಅಮ್ಮಣ್ಣಿ ರಾಮಣ್ಣ ಹಾಲ್​ ಎದುರಿನ ಪಿಪಿಸಿ ಕಾಲೇಜ್​ಗೆ ಹೋಗುವ ರಸ್ತೆಯ ಅಮ್ಮಣ್ಣಿ ರಾಮಣ್ಣ ಹಾಲ್​ ಎದುರು, ತ್ರಿನಿಟಿ ಐಟಿಐ ಕಾಲೇಜಿನ ಎದುರಿನಿಂದ ಸೌತ್​ ಶಾಲೆಗೆ ಹೋಗುವ ರಸ್ತೆಯ, ತ್ರಿನಿಟಿ ಕಾಲೇಜ್​ ಎದುರು, ಹಾಗೂ ಬೀಡಿನಗುಡ್ಡೆಯಿಂದ ವೆಂಕಟರಮಣ ದೇವಸ್ಥಾನಕ್ಕೆ ಬರುವ ರಸ್ತೆಯ ಬೀಡಿನಗುಡ್ಡೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.